ಪ್ರಮುಖ ಸುದ್ದಿ
ಯಾದಗಿರಿಃ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಮಲ್ಲಪ್ಪ ಗೋಗಿ ನೇಮಕ
ಯಾದಗಿರಿಃ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಮಲ್ಲಪ್ಪ ಗೋಗಿ ನೇಮಕ
ಯಾದಗಿರಿಃ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಮೂವರು ಕಾಂಗ್ರೆಸ್ ಮುಖಂಡರನ್ನು ಜಿಲ್ಲಾ ವಕ್ತಾರರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆದೇಶ ಹೊರಡಿಸಿದ್ದಾರೆ.
ಇದರಲ್ಲಿ ಶಹಾಪುರ ತಾಲೂಕಿನ ಕಾಂಗ್ರೆಸ್ ಯುವ ಮುಖಂಡ, ಅಪ್ಪಟ ದರ್ಶನಾಪುರ ಅಭಿಮಾನಿ ಮಾದಿಗ ಸಮಾಜದ ಮುಖಂಡ ಮಲ್ಲಪ್ಪ ಗೋಗಿ ಇವರನ್ನು ಕಾಂಗ್ರೆಸ್ ಸಮಿತಿಯ ಜಿಲ್ಲಾ ವಕ್ತಾರರನ್ನಾಗಿ ನೇಮಿಸಿದ್ದು ಕಾಂಗ್ರೆಸ್ ವಲಯದಲ್ಲಿ ಹರ್ಷ ತಂದಿದೆ ಎನ್ನಲಾಗಿದೆ.
ಇವರ ಜೊತೆ ಸ್ಯಾಮಸನ್ ಮತ್ತು ನರಸಿಂಹರಡ್ಡಿ ಅವರನ್ನು ಜಿಲ್ಲಾ ವಕ್ತಾರರನ್ನಾಗಿ ಆದೇಶಿಸಲಾಗಿದೆ.
ಜಿಲ್ಲಾ ವಕ್ತಾರರಾಗಿ ನೇಮಕಗೊಂಡ ಮೂವರು ಕೂಡಲೇ ಕಾರ್ಯಪ್ರವೃತ್ತರಾಗಿ ಜವಬ್ದಾರಿಯಿಂದ ನಡೆದುಕೊಳ್ಳಬೇಕು. ಪಕ್ಷದ ಏಳ್ಗೆಗಾಗಿ ಶ್ರಮಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.