ಸಮರ್ಪಕ ರಸಗೊಬ್ಬರ ವಿತರಣೆಗೆ ಆಗ್ರಹ
yadgiri, ಶಹಾಪುರಃ ಯಾದಗಿರಿ ಜಿಲ್ಲೆಯಲ್ಲಿ ರೈತಾಪಿ ಜನರು ವಿವಿಧ ಬೆಳೆಗಳ ಬೀಜ ಬಿತ್ತನೆ ಮಾಡಿದ್ದು, ಸಮರ್ಪಕ ಮಳೆಯೂ ಆಗಿದೆ. ಆದರೆ ರಸಗೊಬ್ಬರ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಈಡಾಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಉಳಂಡಗೇರಿ ಆಗ್ರಹಿಸಿದ್ದಾರೆ.
ಮಾದ್ಯಮ ಪ್ರಕಟಣೆ ತಿಳಿಸಿದ ಅವರು, ಜಿಲ್ಲಾದ್ಯಂತ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೀಜ ಬಿತ್ತನೆ ಮಾಡಿದ ರೈತರು ರಸಗೊಬ್ಬರದ ಅಗತ್ಯತೆ ಅನುಗುಣವಾಗಿ ಸುಲಭವಾಗಿ ರೈತರಿಗೆ ದೊರೆಯುವಂತೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು.
ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡಲೇ ರಸಗೊಬ್ಬರ ದಾಸ್ತಾನಿ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುವ ಮೂಲಕ ರೈತರಿಗೆ ಸುಲಭವಾಗಿ ರಸಗೊಬ್ಬರ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.