ನೀವು ಈ ಬ್ರ್ಯಾಂಡ್‍ನ ಮಸಾಲೆ ಪುಡಿ ಬಳಸುತ್ತಿದ್ದೀರಾ? ಹುಷಾರ್!
ಬೆಂಗಳೂರು: ನೀವು ಉಪಯೋಗಿಸುವ ಮಸಾಲೆ ಪದಾರ್ಥಗಳಲ್ಲಿ ಈ ಕೆಳಗಿನ ಪದಾರ್ಥಗಳು ಇದ್ದರೆ ಅವರುಗಳಿಂದ ದೂರವಿರಿ ಕಾರಣ ಅವುಗಳು ಗುಣಮಟ್ಟ ಹೊಂದಿಲ್ಲ ಎಂಬುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೇಳಿದೆ.
ಅವು ಯಾವುವು ಎಂಬ ವಿವರ ಇಲ್ಲಿದೆ. ಹಲವು ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳನ್ನು ಮೈಕ್ರೋ ಬಯೋಲಾಜಿಕಲ್ ಪೆರಿಮಿಟರ್ಸ್ ಅಂಶಗಳನ್ನು ಪರೀಕ್ಷಿಸಲು ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದು, ಅವುಗಳಲ್ಲಿ 23 ಮಾದರಿಗಳಲ್ಲಿ ರೋಗಕಾರಕ ಸೂಕ್ಷ್ಮಾಣು ಜೀವಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿವೆ. ತುಮಕೂರಿನ ಮೆಣಸಿನಕಾಯಿ ಪುಡಿ, ಮೈಸೂರು ಗ್ರಾಮಾಂತರದ ಕೌಶಿಕ್ ಪುಡ್ ಬ್ರ್ಯಾಂಡ್ ನ ಮಿಕ್ಸ್ಡ್ ಮಸಾಲ, ಕೊಪ್ಪಳದ ಶ್ರೀ ಮಂಜುನಾಥ ಬ್ರ್ಯಾಂಡ್‍ನ ಮೆಣಿಸಿನಕಾಯ ಮತ್ತು ಕ್ಯಾಪ್ಸಿಕಾಂ (ಲಾಲ್ ಮಿರ್ಚಿ), ಮಂಡ್ಯದ ಸಾಂಬರ್ ಪುಡಿ, ದಾವಣಗೆರೆಯ ಅಪೇಕ್ಷಾ ಬ್ರ್ಯಾಂಡ್ ನ ಸಾಂಬಾರು ಪುಡಿ, ಚಿಕ್ಕಬಳ್ಳಾಪುರದ ಎ.ಆರ್.ಕೆ ಬ್ರ್ಯಾಂಡ್‍ನ ಮೆಣಿಸಿನಕಾಯಿ ಪುಡಿ, ದಕ್ಷಿಣ ಕನ್ನಡದ ಅರುಣ್ ಮಸಾಲ ಬ್ರ್ಯಾಂಡ್‍ನ ಗರಂ ಮಸಾಲ ಸೇರಿದೆ.
ಇಷ್ಟೇ ಅಲ್ಲದೆ, ಚಿಕ್ಕಮಗಳೂರಿನ ಎವರೆಸ್ಟ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಚಿಕ್ಕಬಳ್ಳಾಪುರದ ಮೆಣಸಿನಕಾಯಿ ಪುಡಿ, ಕೊಡಗಿನ ಈಸ್ಟ್ರನ್ ಬ್ರ್ಯಾಂಡ್ ನ ಧನಿಯಾ ಪುಡಿ, ಲೋಲಾರದ ಸಾಂಬರುಪುಡಿ ಮತ್ತು ಮೆಣಸಿನಕಾಯಿ ಪುಡಿ, ರಾಯಚೂರಿನ ಜಿ.ಸ್ಪೆಷಲ್ (ಸ್ಥಳೀಯ) ಬ್ರ್ಯಾಂಡ್‍ನ ಜಿ.ಟಿ. ಸ್ಪೆಷಲ್ ಮೆಣಸಿನಕಾಯಿಪುಡಿ, ಗದಗಿನ ಎಂ.ಜಿ.ಆರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚಿತ್ರದುರ್ಗದ ಮಾರುತಿ ಬ್ರ್ಯಾಂಡ್ ನ ಮೆಣಸಿನಕಾಯಿ ಪುಡಿ, ಯಾದಗಿರಿಯ ಚಾರ್‍ಮಿನಾರ್ ಸ್ಪೀಸಿಸ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಹಾವೇರಿಯ ಮೆಣಸಿನಕಯಿ ಪುಡಿ ಸೇರಿದೆ. ಇನ್ನು ಕಲಬುರಗಿಯ ಎಂಟಿಆರ್ ಚಿಲ್ಲಿಪೌಡರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚೆನ್ನರಾಯಪಟ್ಟಣದ ತೇಜು ಸಾಂಬರ್ ಪೌಡರ್ ಬ್ರ್ಯಾಂಡ್‍ನ ಸಾಂಬಾರು ಪುಡಿ, ಶಿವಮೊಗ್ಗೆ ಎವರೆಸ್ಡ್ ಬ್ರ್ಯಾಂಡ್ ನ ತೀಕಾಲಾಲ್ ಹಾಟ್ ಅಂಡ್ ರೆಡ್ ಮೆಣಸಿನಕಾಯಿ ಪುಡಿ, ಬಿ.ಬಿ.ಎಂ.ಪಿ, ಪೂರ್ವದ ಎ.ವಿವಿಎ ಬ್ರ್ಯಾಂಡ್ ನ ಬಿಸಿಬೇಳೆ ಬಾತ್ ಪೌಡರ್, ಸಾಂಬಾರು ಪುಡಿ, ವಾಂಗಿಬಾತ್ ಪುಡಿಗಳು ಅಸುರಕ್ಷಿತ ಎಂದು ವರದಿಯಾಗಿದೆ. ಈ ಸಂಬಂಧ ಆಹಾರ ಮಾದರಿಗಳ ತಯಾರಕರುಗಳ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮಗಳು 2011ರನ್ವಯ ಕನೂನು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. Ad