ಪ್ರಮುಖ ಸುದ್ದಿ
ಮಾಜಿ ಮಂತ್ರಿ ಮೇಟಿ ಸಿಡಿ ಕೇಸ್ : ಸಂತ್ರಸ್ಥ ಮಹಿಳೆ ಹತ್ಯೆಗೆ ಸುಪಾರಿ?
ಬಾಗಲಕೋಟೆ : ಮಾಜಿ ಸಚಿವ ಎಚ್.ವೈ .ಮೇಟಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸಂತ್ರಸ್ತ ಮಹಿಳೆ ಮೇಲೆ ನಿನ್ನೆ ರಾತ್ರಿ ಮಾರಣಾಂತಿಕ ಹಲ್ಲೆ ನಡೆದಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕವಿನಿಂದ ಮುಖ, ಕೈಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ತೀವ್ರ ಗಾಯಗೊಂಡಿರುವ ಸಂತ್ರಸ್ತ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ನನ್ನ ಹತ್ಯೆಗೆ ಮೇಟಿ ಅವರೇ ಸುಪಾರಿ ನೀಡಿದ್ದಾರೆಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದು ಬಾಗಲಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.