ಶಹಾಪುರ ಮಾದರಿ ಎಪಿಎಂಸಿ ನಿರ್ಮಾಣಕ್ಕೆ ಒತ್ತು – ದರ್ಶನಾಪುರ
25 ಕೋಟಿ ವೆಚ್ಚದಲ್ಲಿ ಕಾಮಗಾರಿ, ಗುಣಮಟ್ಟ ಕಾಯ್ದುಕೊಳ್ಳಲು ದರ್ಶನಾಪುರ ಸೂಚನೆ
ವರ್ತಕರು, ರೈತರ ಹಿತ ಕಾಪಾಡಿದಾಗ ಮಾರುಕಟ್ಟೆ ಬೆಳೆವಣಿಗೆ ಸಾಧ್ಯ
ದರ್ಶನಾಪುರರಿಂದ ಮಾರುಕಟ್ಟೆ ಕಾಮಗಾರಿ ಪರಿಶೀಲನೆ, ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ, 25 ಕೋಟಿ ವೆಚ್ಚದಲ್ಲಿ ಕಾಮಗಾರಿ
yadgiri, ಶಹಾಪುರಃ ಎಪಿಎಂಸಿಯ ಸಮರ್ಪಕ ಕಾರ್ಯಚಟುವಟಿಕೆಗಳು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತವೆ. ಕೃಷಿ ಮಾರುಕಟ್ಟೆಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಂಗಡಿ, ಗೋದಾಮುಗಳು ಮತ್ತು ಟೆಂಡರ್ ಹಾಲ್, ನೀರಿನ ಸರಬರಾಜು ವ್ಯವಸ್ಥೆ, ವಿದ್ಯುತ್ ಸೌಲಭ್ಯ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಬಸವೇಶ್ವರ ಗಂಜ್ ಏರಿಯಾದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಪಿಎಂಸಿಗೆ ಸುಮಾರು 58 ಎಕರೆ ಜಮೀನು ಲಭ್ಯವಿದ್ದು, ಇದರಲ್ಲಿ ಒತ್ತುವರಿಯಾದ ಜಾಗವನ್ನು ತೆರವು ಗೊಳಿಸಿ ಈ ಪ್ರದೇಶದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ 79 ಅಂಗಡಿಗಳು, 8 ಗೋಡನ್ ಸಹಿತ ಶಾಪ್, ಟೆಂಡರ್ ಹಾಲ್, 52 ತರಕಾರಿ ಅಂಗಡಿಗಳು, 60 ಮೀಟರ್ ವಿಸ್ತಾರದ ವೇ-ಬ್ರಿಡ್ಜ್, ರಸ್ತೆ, ವಿದ್ಯುತ್, ಕುಡಿಯುವ ನೀರು ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು 3 ಎಕರೆ ಪ್ರದೇಶದಲ್ಲಿ ಹೋಲ್ಸೇಲ್ ತರಕಾರಿ ಮಾರುಕಟ್ಟೆಯ ಒಳಾಂಗಣ (ಹರಾಜು ಕಟ್ಟೆ) ನಿರ್ಮಾಣ ಮತ್ತು ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಎಪಿಎಂಸಿಗೆ ಹೆಚ್ಚಿನ ಸೌಕರ್ಯ ಒದಗಿಸಿ ಕೊಡಲು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಿಗೆ ಇನ್ನೂ 20 ಕೋಟಿ ರೂಪಾಯಿ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶಹಾಪುರ ಎಪಿಎಂಸಿ ಮಾದರಿ ಮಾರುಕಟ್ಟೆಯಾಗಿ ನಿರ್ಮಾಣಗೊಳ್ಳಲಿದೆ. ಅಗತ್ಯತೆ ಅನುಗುಣವಾಗಿ ಸಚಿವರು ಇನ್ನೂ 20 ಕೋಟಿ ಅನುದಾನ ಕಲ್ಪಿಸಿದಲ್ಲಿ ಅಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ರೈತರ ಮತ್ತು ವರ್ತಕರ ನಡುವೆ ಉತ್ತಮ ಬಾಂಧವ್ಯ ನಿರ್ಮಾಣ ಆಗುವಂತ ಕೃಷಿಗೆ ಸಂಬಂಧಿಸಿದ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಸ್ಥಳದಲ್ಲಿಯೇ ಸೂಚನೆ ನೀಡಿದರು. ಅಧಿಕಾರಿಗಳು ಸಲಹೆ ನೀಡಿದರು.
ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಬೇಕಾದಲ್ಲಿ ವರ್ತಕರು ಮತ್ತು ಖರೀದಿದಾರರ ಪಾತ್ರ ಬಹು ಮುಖ್ಯ. ಎಪಿಎಂಸಿ ಸಿಬ್ಬಂದಿಯೂ ರೈತರೊಂದಿಗೆ ಸೌಹಾರ್ಧತೆಯಿಂದ ವರ್ತಿಸಬೇಕು. ಮತ್ತು ಕೃಷಿ ಉತ್ಪನ್ನ ಹೊತ್ತು ತಂದ ರೈತರೊಂದಿಗೆ ಮಾರುಕಟ್ಟೆ ಕಾರ್ಯದರ್ಶಿಗಳು ಸಿಬ್ಬಂದಿಯ ವರ್ತನೆ ಪ್ರೀತಿಯಿಂದ ಕೂಡಿರಲಿ ಎಂದು ಸೂಚಿಸಿದರು. ರೈತರು ಮತ್ತು ಎಪಿಎಂಸಿ ಸಿಬ್ಬಂದಿಗಳ ನಡುವೆ ಒಳ್ಳೆಯ ಬಾಂಧವ್ಯ ವೃದ್ಧಿಸುವ ಅಗತ್ಯವಿದೆ, ಆ ನಿಟ್ಟಿನಲ್ಲಿ ಅಧಿಕಾರಿ ಸಿಬ್ಬಂದಿ ಕಾಳಜಿಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸೋಮಣ್ಣಗೌಡ, ಕಾರ್ಯದರ್ಶಿ ಶಿವಣ್ಣಗೌಡ ದೇಸಾಯಿ, ಸದಸ್ಯರಾದ ವೀರಣ್ಣ ಸಾಹು, ಸಂತೋμï ನಿರ್ಮಲ್ಕರ್, ಅಯ್ಯಣ್ಣ, ಶರಣಪ್ಪ, ಗದಿಗೆಪ್ಪ ದೇಸಾಯಿ, ಬಸವರಾಜ, ರಾಮಲಿಂಗಪ್ಪ ಮುಖಂಡರಾದ ಶರಣಗೌಡ ಗುಂಡಗುರ್ತಿ ಸೇರಿದಂತೆ ಹಲವು ರೈತ ಮುಖಂಡರು ಎಪಿಎಂಸಿ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಇದ್ದರು.