ಶಹಾಪುರಃ ರಾತ್ರಿ ಎರಡು ಅಂಗಡಿ ಸೆಟರ್ ಮುರಿದು ಕಳುವು
ಕಿರಾಣಿ, ಎಲೆಕ್ಟ್ರಾನಿಕ್ಸ್ ದುಖಾನ್ ಹಣ ದೋಚಿದ ಕಳ್ಳರು
ಕಿರಾಣಿ, ಎಲೆಕ್ಟ್ರಾನಿಕ್ಸ್ ದುಖಾನ್ ಹಣ ದೋಚಿದ ಕಳ್ಳರು
ಶಹಾಪುರಃ ರಾತ್ರಿ ಎರಡು ಅಂಗಡಿ ಸೆಟರ್ ಮುರಿದು ಕಳುವು
yadgiri, ಶಹಾಪುರಃ ನಗರದ ಪ್ರತಿಷ್ಟಿತ ಕಿರಾಣಿ ಹೋಲ್ ಸೇಲ್ ವೈಷ್ಣವಿ ಮಾರ್ಕೇಟೆಂಗ್(ತುಂಬಗಿ ಅಂಗಡಿ) ಅಂಗಡಿ ಮತ್ತು ಎಸ್.ಬಿ.ಎಲೆಕ್ಟ್ರಾನಿಕ್ಸ್ ಅಂಗಡಿಯ ಸೆಟರ್ ಮುರಿದ ಕಳ್ಳರು ಹಣ ದೋಚಿಕೊಂಡು ಹೋದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತುಂಬಗಿ ಅಂಗಡಿಯಲ್ಲಿ ಸುಮಾರು 30 ಸಾವಿರ ರೂ. ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಐದಾರು ಸಾವಿರ ರೂಪಾಯಿಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್ ಅಂಗಡಿಯಲ್ಲಿ ಯಾವುದೇ ಹೆಚ್ಚಿನ ಹಣ ಇರಲಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಅಂಗಡಿ ಮಾಲೀಕರು ಎಂದಿನಂತೆ ತಮ್ಮ ದೈನಂದಿನ ವ್ಯಾಪಾರ ವಹಿವಾಟು ಮುಗಿಸಿಕೊಂಡು ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ ಮದ್ಯ ರಾತ್ರಿ ಸರಿ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಿಐ ಶ್ರೀನಿವಾಸ ಅಲ್ಲಾಪುರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವದು ಎಂದು ತಿಳಿಸಿದರು, ಇದೇ ವೇಳೆ ನಗರದಲ್ಲಿ ವ್ಯಾಪರಸ್ಥರ ಅಂಗಡಿಗಳ ಕಳ್ಳತನ ಹೆಚ್ಚುತ್ತಿದ್ದು, ರಾತ್ರಿ ಗಸ್ತು ಚುರಕುಗೊಳಿಸಬೇಕೆಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗುಂಡಪ್ಪ ತುಂಬಗಿ ಪೊಲೀಸರಿಗೆ ಮನವಿ ಮಾಡಿದರು.