ಶಹಾಪುರಃ ಕುರಿಗಾಯಿಯನ್ನು ಹೊತ್ತೊಯ್ದ ಮೊಸಳೆ
ಯಕ್ಷಿಂತಿಃ ಮೊಸಳೆಗೆ ಆಹಾರವಾದ ಕುರಿಗಾಯಿ, ಕೃಷ್ಣಾ ನದೀ ತೀರದಿ ಸೇರಿದ ಜನಸ್ತೋಮ
ಶಹಾಪುರಃ ಕುರಿಗಳಿಗೆ ನೀರು ಕುಡಿಸಲು ಕೃಷ್ಣಾ ನದಿ ತೀರಕ್ಕೆ ತೆರಳಿದ್ದ ಕುರಿಗಾಯಿ ಓರ್ವ ಮೊಸಳೆಗೆ ಆಹಾರವಾದ ಘಟನೆ ಮದ್ಯಾಹ್ನ ನಡೆದಿದೆ.
ತಾಲೂಕಿನ ಶಾರದಹಳ್ಳಿ ಗ್ರಾಮ ನಿವಾಸಿಯಾಗಿದ್ದ ಲಕ್ಷ್ಮಣ ತಂದೆ ಭೀಮಣ್ಣ ಎಂಬಾತನೇ ಮೊಸಳೆ ಬಾಯಿಗೆ ಸಿಕ್ಕ ದುರ್ದೈವಿ ಕುರಿಗಾಯಿಯಾಗಿದ್ದು, ಕಳೆದ ತಿಂಗಳ ಹಿಂದೆ ಯಕ್ಷಿಂತಿ ಗ್ರಾಮ ಸಮೀಪ ಕೃಷ್ಣಾ ನದೀ ತೀರದಲ್ಲಿ ಕುರಿಹಟ್ಟಿ ಹಾಕಿಕೊಂಡಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸುಮಾರು 34 ಕುರಿಗಳು ಹೊಂದಿದ್ದ ಆತ ಇಂದು ದುರ್ದೈವಶಾತ್ ಮೊಸಳೆ ಬಾಯಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಜನರು ನದಿ ತೀರಕ್ಕೆ ದೌಡಾಯಿಸಿದ್ದು, ವ್ಯಕ್ತಿ ಪತ್ತೆಗಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೇನು ಸ್ಥಳಕ್ಕೆ ಆಗಮಿಸಲಿದ್ದು, ಅಲ್ಲಿವರೆಗೂ ಸಾರ್ವಜನಿಕರು ಯಾರು ಹುಚ್ಚು ಸಾಹಸ ಮಾಡದಿರಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಈ ವ್ಯಾಪಕ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಮೊಸಳೆ ಪಾಲಾದ ಕುರಿಗಾಯಿಗೆ ನಾಲ್ಕು ಜನ ಮಕ್ಕಳಿದ್ದು ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದರು.