ಶಾಲಾ ಮಕ್ಕಳಿಗೆ ತತ್ತಿ, ಬಾಳೆಹಣ್ಣು ವಿತರಣೆ

ಪೌಷ್ಠಿಕಾಂಶ ಕೊರತೆ ನೀಗಿಸಲು ಮೊಟ್ಟೆ, ಬಾಳೆಹಣ್ಣು ವಿತರಣೆ
yadgiri, ಶಹಾಪುರಃ ರಾಜ್ಯ ಸರ್ಕಾರ ಆದೇಶದಂತೆ ನಗರದ ಸಂತಪಾಲ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಿಸಲಾಯಿತು. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ಕಂಡು ಬಂದಿರುವ ಹಿನ್ನೆಲೆ ರಾಜ್ಯ ಸರ್ಕಾರ ಕಕ ಭಾಗದ ಜಿಲ್ಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ಬಾರಿ ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು ನೀಡಲು ವ್ಯವಸ್ಥೆ ಮಾಡಿದೆ.
ಡಿಸೆಂಬರ್ 1 ರಿಂದ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಸರ್ಕಾರ ಆದೇಶ ನೀಡಿದ್ದು, ಸಂತಪಾಲ ಶಾಲೆಯಲ್ಲಿ ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆ ಹಾಗೂ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲಾಯಿತು ಎಂದು ಶಿಕ್ಷಕರು ತಿಳಿಸಿದರು.
ರಾಜ್ಯದ ಕಕ ಭಾಗದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಕಂಡು ಬರುವ ಪೌಷ್ಟಿಕಾಂಶ ಕೊರತೆ ನೀಗಿಸಲು ರಾಜ್ಯ ಸರ್ಕಾರ ಈ ಆದೇಶ ನೀಡಿದೆ. ಅನ್ನ ಸಾಂಬಾರ್ ಜೊತೆಗೆ ಮೊಟ್ಟೆ, ಬಾಳೆ ಹಣ್ಣು ಪಡೆದ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂತಪಾಲ ಮುಖ್ಯೋಪಾಧ್ಯಾಯ ಸ್ಟ್ಯಾನ್‍ಲಿ ವರದರಾಜ ಸೇರಿದಂತೆ ಶಿಕ್ಷಕ ವೃಂದ ಮತ್ತು ಅಡುಗೆ ಕೆಲಸಗಾರರು ಇದ್ದರು.