ಪ್ರಮುಖ ಸುದ್ದಿ
ಜೂ.1 ರಿಂದಲೇ ಮುಂಗಾರು ಮಳೆ ಆರಂಭ- ಹವಾಮಾನ ಇಲಾಖೆ
ಜೂ.1 ರಿಂದಲೇ ಮುಂಗಾರು – ಉತ್ತಮ ನಿರೀಕ್ಷೆ
ನವದೆಹಲಿಃ ಈ ವರ್ಷ ಜೂನ್ 1 ರಿಂದಲೇ ನೈರುತ್ಯ ಮುಂಗಾರು ಮಾರುತ ಭಾರತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರತಿ ವರ್ಷ ಸಾಮಾನ್ಯವಾಗಿ ಜೂನ್ ಒಂದರಿಂದ ಮಳೆಗಾಲ ಆರಂಭವಾಗುತ್ತೆ. ಆದರೆ ಮುಂಗಾರು ಆರಂಭ ಕೆಲವೊಮ್ಮೆ ತಡವಾಗಿ ಅಥವಾ ಮುಂಚಿತವಾಗಿ ಆಗಮಿಸುತ್ತದೆ.
ಈ ಬಾರಿ ಜೂನ್ ಮೊದಲದಿನವೇ ಮುಂಗಾರು ಮಾರುತ ಕೇರಳದ ಮೂಲಕ ಭಾರತ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಈ ಬಾರಿ ಮುಂಗಾರು ಮಳೆ ಉತ್ತಮ ನಿರೀಕ್ಷೆ ಮೂಡಿಸಿದೆ.