ಯಾದಗಿರಿ: ಹಳೆ ವೈಷಮ್ಯ ಹಿನ್ನೆಲೆ, ಓರ್ವನ ಕೊಲೆ..!
ಶಹಾಪುರಃ ಖಾನಾಪುರದಲ್ಲಿ ಹಳೇ ವೈಷಮ್ಯ ಹಿನ್ನೆಲೆ ಓರ್ವನ ಕೊಲೆ..!
ಯಾದಗಿರಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಲೆಗೈದು ಶವವನ್ನು ಟ್ರ್ಯಾಕ್ಟರ್ ಕೆಳಗೆ ಎಸೆದು ಹೋದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಶೇಂಗಾ ಬಿತ್ತನೆ ಮಾಡಲು ಹೊಲಕ್ಕೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಶವ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಸಿದ್ರಾಮಪ್ಪ ಅರ್ಜುಣಗಿ (50) ಎಂಬ ವ್ಯಕ್ತಿಯೇ ಕೊಲೆಗೀಡಾದವರು ಎಂದು ಗುರುತಿಸಲಾಗಿದೆ.
ಗ್ರಾಮದ ಹೊರಭಾಗದಲ್ಲಿ ಘಟನೆ ನಡೆದಿದ್ದು, ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ಸಿದ್ರಾಮಪ್ಪ ಅರ್ಜುಣಗಿ 9 ವರ್ಷದ ಹಿಂದೆ ನಡೆದ ಕೊಲೆ ಕೇಸೊಂದರಲ್ಲಿ ಆರೋಪಿತನಾಗಿದ್ದ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಹಿಂದಷ್ಟೆ ಸಿದ್ರಾಮಪ್ಪ ಅರ್ಜುಣಗಿ ಆರೋಪದಿಂದ ಮುಕ್ತನಾಗಿ ಹೊರ ಬಂದಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ, ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಕೊಲೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ತನಿಖೆಯಿಂದ ಕೊಲೆಗೆ ಕಾರಣವೇನೆಂಬುದು ತಿಳಿದು ಬರಬೇಕಿದೆ.