ನಿಜ ನಾಗರಕ್ಕೆ ಪೂಜೆ ಮಾಡಿದ ಪೂಜಾರಿ, ವೀಡಿಯೋ ವೈರಲ್
ಹೆಡೆ ಎತ್ತಿದ ನಾಗರಾಜನಿಗೆ ಅದ್ಭುತ ಪೂಜೆ
ನಿಜ ನಾಗರಕ್ಕೆ ಪೂಜೆ ಮಾಡಿದ ಪೂಜಾರಿ, ವೀಡಿಯೋ ವೈರಲ್
ನಾಗರ ಪಂಚಮಿ ಯಂದು ನಿಜ ನಾಗರಕ್ಕೆ ಪೂಜೆ, ವೀಡಿಯೋ ಕೈ ಮುಗಿದ ಜನತೆ
ವಿವಿ ಡೆಸ್ಕ್ಃ ನಾಗರ ಪಂಚಮಿ ಹಬ್ಬದಂಗವಾಗಿ ಇಂದು ವಾಡಿಕೆಯಂತೆ ನಾಗರ ಕಟ್ಟೆಗೆ ಹೋಗಿ ನಾಗದೇವರಿಗೆ ಹಾಲೆರೆದು ನೈವೇದ್ಯ ಅರ್ಪಿಸಿರುವದು ಎಲ್ಲ ಕಡೆ ನೋಡಿದ್ದೀರಿ.
ಆದರೆ ಇದೇ ವೇಳೆ ಕಲ್ಲ ನಾಗರ ಕಂಡರೆ ಹಾಲೆರಿಯುವರಯ್ಯ ನಿಜ ನಾಗರ ಕಂಡರೆ ಕಲ್ಲಿನಿಂದ ಹೊಡೆಯುವರಯ್ಯ ಎಂಬ ವಚನಕ್ಕೆ ಅಪವಾದ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡುತ್ತಿದ್ದು, ನಿಜ ನಾಗರಕ್ಕೆ ಹೂ ಸಮರ್ಪಿಸಿ ಹಾಲೆರೆದು ಪೂಜಾರಿಯೋರ್ವ ಊದಿನ ಕಡ್ಡಿ ಬೆಳಗುತ್ತಿರುವದು ಸೋಜಿಗವೆನಿಸಿದೆ.
ಯಾವುದೋ ದೇವಿ ಗುಡಿಯೊಂದರಲ್ಲಿ ತಾಮ್ರದ ತಟ್ಟೆಯಲ್ಲಿ ತನ್ನ ಹೆಡೆ ಎತ್ತಿ ದರ್ಶನ ನೀಡಿದ ನಾಗರಾಜನ ಸಲ್ಲುತ್ತಿರುವ ಪೂಜಾ ದೃಶ್ಯ ನೋಡಿ ಭಕ್ತಾಧಿಗಳು ಮನದಲ್ಲಿಯೇ ನಮಿಸುವಂತಿದೆ.
ಈ ಅದ್ಭುತ ವೀಡಿಯೋ ತುಂಬಾ ವೈರಲ್ ಆಗಿದ್ದು, ವೀಡಿಯೋ ನೋಡಿದವರು ಲೈಕ್ ನೀಡುವ ಜೊತೆಗೆ ಕೈ ಮುಗಿಯುತ್ತಿದ್ದಾರೆ. ಆದರೆ ಈ ಘಟನೆ ನಡೆದ ವಿಳಾಸ ಮಾತ್ರ ಗೊತ್ತಿಲ್ಲ.
–ಮಲ್ಲಿಕಾರ್ಜುನ ಮುದ್ನೂರ