ನಾಗರ ಕೆರೆಯಲ್ಲಿ ಮುಳುಗಿ ಯುವಕ ಸಾವು
yadgiri, ಶಹಾಪುರಃ ನಗರದ ನಾಗರಕೆರೆಯಲ್ಲಿ ಯುವಕನೋರ್ವ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ಸಂಜೆ ನಡೆದಿದೆ.
ಮೃತ ಯುವಕ ಆಸರಮೊಹಲ್ಲಾದ ಖಲೀಲ (23) ಎಂದು ಗುರುತಿಸಲಾಗಿದೆ. ಮದ್ಯಾಹ್ನ ವೇಳೆಯೆ ಖಲೀಲ್ ಎಂಬಾತ ತೊಟ್ಟ ಉಡುಗೆ ಸಮೇತ ಕೆರೆಗೆ ಇಳಿದಿದ್ದು, ಒಳ ಹೋದಂತೆ ತಡವಾದರು ಹೊರಗಡೆ ಬಾರದನ್ನು ಕೆರೆ ಹತ್ತಿರ ನೆರೆದವರು ಗಮನಿಸಿದ್ದು, ತಕ್ಷಣ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಗಿ, ಪೊಲೀಸರು ಅಗ್ನಿಶಾಮಕ ದಳ ಸಮೇತ ಕೆರೆಗೆ ಬಂದು ಯುವಕ ಪತ್ತೆಗೆ ಹರಸಹಾಸ ಪಟ್ಟಿದ್ದಾರೆ. ಸ್ಥಳೀಯರು ಸಹ ಸಾಥ್ ನೀಡಿದ್ದಾರೆ.
ಸಂಜೆ ವೇಳೆಗೆ ಯುವಕನ ಮೃತ ದೇಹ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಯುವಕ ಅಸ್ವಸ್ಥನಿದ್ದ ಎಂದು ಹೇಳಲಾಗುತ್ತಿದ್ದು, ಸಮರ್ಪಕ ಮಾಹಿತಿ ದೊರೆತಿಲ್ಲ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.