ಪ್ರಮುಖ ಸುದ್ದಿ
ನಂದಿಗ್ರಾಮ ಕ್ಷೇತ್ರ – ಮಮತಾ ದೀದಿಗೆ ಸೋಲು
ನಂದಿಗ್ರಾಮ ಕ್ಷೇತ್ರ ಮಮತಾ ದೀದಿಗೆ ಸೋಲು
ಪ.ಬಂಗಾಲಃ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ದೀದಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ಬಿಗ್ ಫೈಟ್ ನಡೆದಿದ್ದು, ಕೊನೆಕ್ಷಣದಲ್ಲಿ ಮಮತಾ ದೀದಿ 1622 ಮತಗಳ ಅಂತರದಿಂದ ಸೋಲುಂಡರು.
ರೋಷಕ ತಿರುವು ಪಡೆದ ಈ ಕ್ಷೇತ್ರದಲ್ಲಿ ಬಿಗ್ ಫೈಟ್ ನಡೆದಿದ್ದು, ಅಮೀತ್ ಶಾ ಮತ್ತು ಮೋದಿಯವರು ದೀದಿಯನ್ನ ಸೋಲಿಸೇ ತೀರುತ್ತೇವೆ ಎಂಬ ಜಿದ್ದಿನಲ್ಲಿ ಚುನಾವಣೆ ಪ್ರಚಾರ ನಡೆದಿತ್ತು.
ಕೊನೆಗೂ ದೀದಿಗೆ ಸೋಲುಣಿಸಿದ ಬಿಜೆಪಿ ಗೆಲುವಿನ ನಗೆ ಬೀರಿದೆ. ಸರಳ ಬಹುಮತ ಪಡೆದ ದೀದಿ ಅ್ವತಃ ತಾನೇ ಸೋಲುಣ್ಣುವ ಸ್ಥಿತಿ ಎದುರಾಗಿದ್ದು ಮಾತ್ರ ಬಿಜೆಪಿ ಯ ಶ್ರಮ ಮೆಚ್ಚಲೇಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.
ಮೊದಲ ಬಾರಿಗೆ ದೀದಿಗೆ ಸೊಲುಣಿಸಿದ ಬಿಜೆಪಿ ಖುಷಿಯದ ಬೀಗುತ್ತಿದೆ. 2016 ರಲ್ಲಿ ಕೇವಲ 3 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಬಿಜೆಪಿ ಇಂದು ಬಂಗಾಲದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಅದರಲ್ಲೂ ದೀದಿಯನ್ನೆ ಸೋಲುಣಿಸಿರುವದು ಇತಿಹಾಸ ನಿರ್ಮಾಣ ಮಾಡಿದೆ ಎನ್ನಬಹುದು.