ನಿವೃತ್ತ ನೌಕರರ ಸಂತೃಪ್ತ ಬದುಕಿಗೆ ಆಸರೆ ಅಗತ್ಯ – ದರ್ಶನಾಪುರ
ನಿವೃತ್ತ ನೌಕರರ ಸಂಘದ ಬೇಡಿಕೆ ಈಡೇರಿಕೆಗೆ ಬದ್ಧ – ದರ್ಶನಾಪುರ
ನಿವೃತ್ತ ನೌಕರರ ಸಂಘದ ಬೇಡಿಕೆ ಈಡೇರಿಕೆಗೆ ಬದ್ಧ – ದರ್ಶನಾಪುರ
ನಿವೃತ್ತ ನೌಕರರ ಸಂತೃಪ್ತ ಬದುಕಿಗೆ ಆಸರೆ ಅಗತ್ಯ
yadgiri, ಶಹಾಪುರಃ ಹಲವಾರು ವರ್ಷ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯ ಜೀವನವನ್ನು ನೆಮ್ಮದಿಯಿಂದ ಸಂತೃಪ್ತತೆಯಿಂದ ಕಳೆಯುವದು ಅಗತ್ಯವಿದೆ. ಆ ನಿಟ್ಟಿನಲ್ಲಿ ಕೈಲಾದ ಸಹಾಯ ಸಹಕಾರ ನೀಡುವದು ಅಗತ್ಯವಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ಚಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತಿಯ ನಂತರ ನೌಕರರಿಗೆ ಬೆಳಗ್ಗೆ ಮತ್ತು ಸಂಜೆ ಒಂದಿಷ್ಟು ವಾಯು ವಿಹಾರ ನಿವೃತ್ತರೆಲ್ಲರೂ ಒಂದಡೆ ಸೇರಿ ಕುಳಿತುಕೊಂಡು ಅಭಿರುಚಿಯ ಅನುಭವದ ಮಾತುಗಲನ್ನು ಪರಸ್ಪರರು ಹಂಚಿಕೊಳ್ಳಲು ನಿರ್ದಿಷ್ಟ ಕಚೇರಿ ಅಗತ್ಯವಿದ್ದು, ತಮ್ಮ ಬೇಡಿಕೆಯಂತೆ ಶಾಸಕರ ನಿಧಿಯಡಿ ಅನುದಾನ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.
ಅಲ್ಲದೆ ನಗರದಲ್ಲಿರುವ ಎನ್‍ಜಿಓ ಕಾಲೊನಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕಲ್ಪಿಸಿದ್ದು, ರಸ್ತೆ ಚರಂಡಿ ಕಾಮಗಾರಿಗಳು ನಡೆದಿವೆ. ಶೀಘ್ರದಲ್ಲಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿಯೂ ಆರಂಭವಾಗಲಿದೆ. ಹೀಗಾಗಿ ಆ ಕಾಲೊನಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ ಎಂದರು.
ವಿಶ್ವಕರ್ಮ ಏಕದಂಡಿಗಿ ಮಠದ ಅಜೇಂದ್ರ ಮಹಾಸ್ವಾಮಿಗಳು ಹಿರಿ ನಾಗರಿಕರ ಬದುಕಿನ ಕುರಿತು ನಿವೃತ್ತ ಜೀವನ ಕುರಿತು ಸಮರ್ಪಕ ಉಪನ್ಯಾಸ ನೀಡಿದರು. ಸಂಘದ ರಾಜ್ಯ ಅಧ್ಯಕ್ಷ ಡಾ.ಎಲ್.ಭೈರಪ್ಪ ಮಾತನಾಡಿದರು.
ಫಕಿರೇಶ್ವರ ಮಠದ ಗುರುಪಾದ ಮಹಾಸ್ವಾಮಿ, ಚಬ ಗದ್ದುಗೆಯ ಬಸವಯ್ಯ ಶರಣರು ಸಾನ್ನಿಧ್ಯವಹಿಸಿದ್ದರು. ತಾಲೂಕು ರಾಸನೌಸಂಘದ ಅಧ್ಯಕ್ಷ ಎನ್.ಸಿ.ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ಹಿರಿಯರಾದ ಭೀಮರಡ್ಡಿ ಬೈರಡ್ಡಿ, ವಿಶ್ವನಾಥರಡ್ಡಿ ದರ್ಶನಾಪುರ, ರಾಯಪ್ಪಗೌಡ ಹುಡೇದ, ಸಾಹಿತಿ ಸಿದ್ಧರಾಮ ಹೊನ್ಕಲ್, ರಾಮಯ್ಯ ಶಾಬಾದಿ, ಎಸ್‍ಬಿಐ ಬ್ಯಾಂಕ್ ವ್ಯವಸ್ಥಾಪಕ ಜೆ.ಎಂ.ಫಣೇಂದ್ರ ಸ್ವಾಮಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 80 ವಯಸ್ಸು ತುಂಬಿದ ಹಿರಿಯರನ್ನು ಸನ್ಮಾನಿಸಲಾಯಿತು. ಮತ್ತು ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕಿ ಚಂದ್ರಕಲಾ ಗೂಗಲ್, ಕಸಾಪ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಕಾನಿಪ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಸೇರಿದಂತೆ ಇಂಜಿನಿಯರ ರಾಜು ಸಾಹುಕಾರ ಅವರನ್ನು ಸನ್ಮಾನಿಸಲಾಯಿತು.