ಶಹಾಪುರಃ ಪವಿತ್ರ ರಂಜಾನ್ ಹಬ್ಬಃ ಮನೆಯಲ್ಲಿಯೇ ಪ್ರಾರ್ಥನೆ
ಪವಿತ್ರ ರಂಜಾನ್ ಹಬ್ಬಃ ಮನೆಯಲ್ಲಿಯೇ ಪ್ರಾರ್ಥನೆ
ಶಹಾಪುರಃ ಜಗತ್ತಿನಾದ್ಯಂತ ನಡೆಯುವ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಗಳು ಈ ಬಾರಿ ಕೊರೊನಾ ಹಾವಳಿಯಿಂದ ಜರುಗಲಿಲ್ಲ. ಮುಸ್ಲಿಂ ಬಾಂಧವರು ನಿಯಮನುಸಾರ ತಮ್ಮ ತಮ್ಮ ಮನೆಯಲ್ಲಿಯೇ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿರುವದು ಕಂಡು ಬಂದಿತು.
ಪ್ರತಿ ವರ್ಷ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ನಡೆಯುವ ಪ್ರಾರ್ಥನೆ ನಡೆಯದ್ದರಿಂದ ಮಸೀದಿ, ಈದ್ಗಾ, ದರ್ಗಾಗಳು ಯಾರೊಬ್ಬರೂ ಕಾಣದೆ ಬಿಕೋ ಎನ್ನುತ್ತಿದ್ದವು. ಈದ್ಗಾ ಮಸೀದಿಯಲ್ಲಿ ಮುಂಜಾಗೃತವಾಗಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.
ಲಾಕ್ ಡೌನ್ ನಿಯಮಾವಳಿ ಪ್ರಕಾರ ಮಸೀದಿ, ಈದ್ಗಾದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲದ ಕಾರಣ ಯಾರೊಬ್ಬರು ಇತ್ತ ಸುಳಿಯಲಿಲ್ಲ. ಪವಿತ್ರ ರಂಜಾನ್ ಅನ್ನು ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಆಚರಣೆ ಮಾಡುವ ಮೂಲಕ ಸಂಭ್ರಮಿಸಿದರು.
ಆದಾಗ್ಯು ಲಾಕ್ ಡೌನ್ ಕರಿ ನೆರಳು. ಕೊರೊನಾ ಆತಂಕದಲ್ಲಿಯೇ ಹಬ್ಬ ಆಚರಿಸಿದಂತಾಯಿತು. ಹಿಂದೂಗಳ ಪ್ರಥಮ ವರ್ಷಾಚರಣೆ ಯುಗಾದಿಯೂ ಸಹ ಕೊರೊನಾ ಆತಂಕದ ನಡುವೆಯೇ ಜನ ಆಚರಣೆ ಮಾಡಿದ್ದರು. ನಗರದ ಈದ್ಗಾ, ಮಸೀದಿಯಲ್ಲಿ ಪಿಎಸ್‍ಐ ಚಂದ್ರಕಾಂತ ಮೆಕಾಲೆ ಹಾಗೂ ಪೊಲೀಸ್ ಕಾನ್ಸ್ ಟೇಬಲ್‍ಗಳು ಸೂಕ್ತ ಬಂದೋಬಸ್ತ್‍ಗೆ ನಿಂತಿದ್ದರು.