ಪ್ರಮುಖ ಸುದ್ದಿ

ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ-ಎಸ್ಪಿ ವೇದಮೂರ್ತಿ

ಕಟ್ಟುನಿಟ್ಟಾಗಿ ಪಬ್ಲಿಕ್ ಆಕ್ಟ್ ನಿಯಮ ಪಾಲನೆಗೆ ಸೂಚನೆ

yadgiri,ಶಹಾಪುರಃ ನಗರದಲ್ಲಿ ಸಂಚಾರ ಅವ್ಯವಸ್ಥೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಕಡ್ಡಾಯವಾಗಿ ಎಲ್ಲರೂ ಪಬ್ಲಿಕ್ ಆಕ್ಟ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ಬಲಿಕ್ ಕಾಯ್ದೆ ಪ್ರಕಾರ ವ್ಯಾಪಾರಸ್ಥರು ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ತಿಳಿಸಿದರು.

ನಗರ ಠಾಣೆಯಲ್ಲಿ ನಡೆದ ಸಂಚಾರ ಸುವ್ಯವಸ್ಥೆಗೊಳಿಸುವ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪೊಲೀಸರು ಗುರುತಿಸಿರುವ ನಗರದ ಮೂರು ಕಡೆ ಆಟೋ ನಿಲ್ಲಲು ಸೂಚಿಸಲಾಗಿದೆ. ಒಂದಡೆ ನಿಲ್ಲಿಸಿದಲ್ಲಿ ಟ್ರಾಫಿಕ್ ಸಮಸ್ಯೆ ಆಗಲಿದೆ. ಹೀಗಾಗಿ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಮತ್ತು ಬಸವೇಶ್ವರ ವೃತ್ತ ಭಾಗದಲ್ಲಿ ಆಟೋ ನಿಲ್ಲಿಸಲು ಸ್ಥಳವಕಾಶ ಕಲ್ಪಿಸಲಾಗುತ್ತದೆ.  ಆಟೋ ಚಾಲಕರು ಅದನ್ನು ಚಾಚು ತಪ್ಪದೆ ಪಾಲಿಸಬೇಕು.

ಅಲ್ಲದೆ ಬಸ್ ಚಾಲಕರು ಎಲ್ಲೆಂದರಲ್ಲಿ ಬಸ್ ನಿಲ್ಲಿಸುತ್ತಿರುವದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ ಎಂಬ ದೂರುಗಳಿವೆ. ಅದಕ್ಕೂ ಕಡಿವಾಣ ಹಾಕಲಾಗುತ್ತದೆ. ಸಾರ್ವಜನಿಕರು ನಗರಸಭೆ ಅಧಿಕಾರಿಗಳು ಪೊಲೀಸರು ಸಹಭಾಗಿತ್ವದೊಂದಿಗೆ ಟ್ರಾಫಿಕ್ ಸಮಸ್ಯೆ ಶಮನಗೊಳಿಸಲು ಸಾಧ್ಯವಿದೆ ಎಂದರು.

ಸುರಪುರ ವಲಯದ ಡಿವೈಎಸ್ಪಿ ದೇವರಾಜ ಮಾತನಾಡಿ, ಕಿರಾಣಿ ಅಂಗಡಿಗಳು ಸೇರಿದಂತೆ ಹೊಟೇಲ್ ಮತ್ತು ಬಾರ್ ಆಂಡ್ ರೆಸ್ಟೋರೆಂಟ್, ಶಿಕ್ಷಣ ಸಂಸ್ಥೆಗಳು, ಅಪಾರ್ಟ್‍ಮೆಂಟ್‍ಗಳು, ಕಾಂಪ್ಲೆಕ್ಸ್‍ಗಳು ಸೇರಿದಂತೆ ಕಲ್ಯಾಣ ಮಂಟಪ ಇತರಡೆ ಆಯಾ ಕಟ್ಟಿನ ಜಾಗಗಳಲ್ಲಿ 100 ರಿಂದ 500 ಜನ ಓಡಾಡುವ ಪ್ರದೇಶ ಸ್ಥಳ ಅಥವಾ ವ್ಯಾಪಾರ ನಡೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಿದೆ.

ಈ ಕಾಯ್ದೆ 2017 ರಲ್ಲಿ ಜಾರಿಯಾಗಿದ್ದು, ಯಾರೊಬ್ಬರು ಇದನ್ನು ಸಮರ್ಪಕವಾಗಿ ಅಳವಡಿಸುವಲ್ಲಿ ವಿಫಲರಾಗಿದ್ದೇವೆ. ನಗರದಲ್ಲಿ ಇನ್ಮುಂದೆ ಪಬ್ಲಿಕ್ ಕಾಯ್ದೆ ಅನುಸಾರ ಸಮರ್ಪಕವಾಗಿ ಕಾನೂನು ಜಾರಿ ಇರಲಿದೆ. ಎಲ್ಲರೂ ಸಹಕರಿಸಿದ್ದಲ್ಲಿ ಕಳ್ಳತನ ತಡೆ ಸೇರಿದಂತೆ ಅಪಘಾತಗಳ ತಡೆಗೂ ಸಹಕಾರಿಯಾಗಲಿದೆ ಎಂದರು.

ನಗರಸಭೆ ಪೌರಾಯುಕ್ತ ಓಂಕಾರ ಪೂಜಾರಿ, ಬಡ್ ಡಿಪೋ ವ್ಯವಸ್ಥಾಪಕ ಪಾಲಾಕ್ಷಿ ಹರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಪಿಐ ಶ್ರೀನಿವಾಸ ಅಲ್ಲಾಪುರೆ, ನಗರಸಭೆ ಎಇಇ ನಾನಾಸಾಬ ಮಡಿವಾಳ, ಪರಿಸರ ಅಭಿಯಂತರ ಹರೀಶ್ ಉಪಸ್ಥಿತರಿದ್ದರು.

ವ್ಯಾಪಾರಸ್ಥರು ಅಂಗಡಿಗಳ ಮುಂದಿನ ಫುಟ್ ಪಾತ್ ಆಕ್ರಮಿಕೊಂಡಿದ್ದು, ಸಾಕಷ್ಟು ಬಾರಿ ಎಚ್ಚರಿಕೆ ಕೊಟ್ಟರೂ ಯಾರೊಬ್ಬರು ಕೇಳುತ್ತಿಲ್ಲ. ಲಾರಿ ತಂದು ಫುಟ್ ಪಾತ್ ಮೇಲೆ ಒಟ್ಟಿದ್ದ ಸಾಮಾಗ್ರಿಗಳನ್ನು ಹೊತ್ತೊಯ್ಯಲಾಗುವದು. ಕೂಡಲೇ ನಿಯಮನುಸಾರ ವ್ಯಾಪಾರ ನಡೆಸಿ, ಫುಟ್ ಪಾತ್ ಜಾಗ್ರ ಆಕ್ರಮಿಸಿಕೊಂಡ ಕಾರಣ ಸಾಕಷ್ಟು ತೊಂದರೆ ಆಗ್ತಿದೆ. ಟ್ರಾಫಿಕ್ ಗೆ ಇದೊಂದು ಕಾರಣ, ಹೀಗಾಗಿ ಎಲ್ಲರೂ ಬದುಕಬೇಕಿದೆ. ಆ ನಿಟ್ಟಿನಲ್ಲಿ ಕಾಣೂನು ಪಾಲಿಸಬೇಕು. ಅಪಘಾತ, ಕಳ್ಳತನಗಳು ತಡೆಯಬೇಕು. ಅದಕ್ಕೆ ಎಲ್ಲರೂ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ ನಗರವನ್ನು ಸ್ವಚ್ಛ, ಸುಂದರವಾಗಿರಿಕೊಳ್ಳೋಣ ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು.

-ಡಾ.ವೇದಮೂರ್ತಿ. ಎಸ್ಪಿ ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button