ಪೌರ ಕಾರ್ಮಿಕರ ದಿನಾಚರಣೆ
ಪೌರಕಾರ್ಮಿಕರು ನಗರದ ಜೀವನಾಡಿಗಳು – ಬಡಿಗೇರ
ಪೌರ ಕಾರ್ಮಿಕರ ಸೇವೆ ಅನನ್ಯ ಬೆಲೆ ಕಟ್ಟಲಾಗದು- ಬಡಿಗೇರ ಅಭಿಮತ
yadgiri, ಶಹಾಪುರಃ ಪೌರ ಕಾರ್ಮಿಕರ ಸೇವೆ ಅನನ್ಯ ಅದಕ್ಕೆ ಬೆಲೆ ಕಟ್ಟಲಾಗದು. ಪೌರ ಕಾರ್ಮಿಕರು ಪಟ್ಟಣದ ಜೀವನ ನಾಡಿಗಳಿದ್ದಂತೆ. ಅವರ ಸೇವೆಯಿಂದಲೇ ಪೌರರ ಬದುಕು ಆರೋಗ್ಯಕರವಾಗಿ ಮುನ್ನಡೆಯಲಿದೆ ಎಂದು ಪೌರಾಯುಕ್ತ ರಮೇಶ ಬಡಿಗೇರ ಅಭಿಮತ ವ್ಯಕ್ತಪಡಿಸಿದರು.
ನಗರದ ಟೌನ್ ಹಾಲ್ ನಲ್ಲಿ ಶನಿವಾರ ಪೌರ ಸೇವಾ ನೌಕರರ ಸಂಘ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರು ಇಡಿ ನಗರ ಸುಂದರ ಮತ್ತು ಸ್ವಚ್ಛತೆ ಇರುವಂತೆ ನೋಡಿಕೊಳ್ಳುತ್ತಾರೆ. ಅವರು ಆರೋಗ್ಯವಾಗಿದ್ದಲ್ಲಿ ಪೌರರು ಆರೋಗ್ಯವಾಗಿರಲು ಸಾಧ್ಯವಿದೆ. ಪೌರ ಕಾರ್ಮಿಕರು ತಮ್ಮ ಆರೊಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯ ಕಾಪಾಡಲು ನಿತ್ಯ ನಿರಂತರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಲ್ಲದೆ ಯಾವುದೇ ಸಭೆ, ಕಾರ್ಯಕ್ರಮ, ಜಾತ್ರೆ ಉತ್ಸವಗಳಿದ್ದರೂ ಪೌರ ಕಾರ್ಮಿಕರ ಸೇವೆ ಅಗತ್ಯವಿರುತ್ತದೆ. ಹೀಗಾಗಿ ನಿತ್ಯ ಪೌರ ಕಾರ್ಮಿಕರಿಗಾಗಿ ಶ್ರೀದೇವರು ಆರೋಗ್ಯ ಭಾಗ್ಯ ಕಲ್ಪಿಸಲಿ ಎಂದು ಆಶಿಸುತ್ತೇನೆ ಅಲ್ಲದೆ ಮುಖ್ಯವಾಗಿ ಕಾರ್ಮಿಕರು ಕೆಲಸದ ವೇಳೆ ಹ್ಯಾಂಡ್ ಬ್ಲೌಸ್ ಮತ್ತು ಕಾಲಿಗೆ ಶೂಗಳನ್ನು ಕಡ್ಡಾಯವಾಗಿ ಧರಿಸಬೇಕು ನಿಮಗೂ ಕುಟುಂಬವಿದೆ ಅವರನ್ನು ಸಲುಹುವ ಜವಬ್ದಾರಿ ತಮಗಿದೆ ಎಂಬುದನ್ನು ಮರೆಯಬಾರದು ಎಂದರು.
ಇದೇ ಸಂದರ್ಭದಲ್ಲಿ ಸರ್ವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಕಾಣಿಕೆ ನೀಡಿ ಗೌರವಿಸಲಾಯಿತು. ಹಿರಿಯ ಪೌರಕಾರ್ಮಿಕ ಮಲ್ಲಪ್ಪ ಬಂಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಇಇ ನಾನಾಸಾಬ ಮಡಿವಾಳಕರ್, ಪರಿಸರ ಅಭಿಯಂತರ ಹರೀಶ ಸಜ್ಜನಶೆಟ್ಟಿ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಶರಣು ನರಿಬೋಳಿ, ಉಪಾಧ್ಯಕ್ಷ ದೇವಿಂದ್ರಪ್ಪ ಪೂಜಾರಿ, ಆರ್‍ಐ ಶರಣು, ಪ್ರಶಾಂತರಡ್ಡಿ, ಜೆಇ ರಾಜವರ್ಧನರಡ್ಡಿ, ಮಲ್ಲಿಕಾರ್ಜುನ, ದೇವಪ್ಪ ಗುಡಿ, ಮರೆಮ್ಮ, ರವಿ ಉಪಸ್ಥಿತರಿದ್ದರು,
ನಗರಸಭೆ ಸದಸ್ಯರಾದ ಅಶೋಕ ನಾಯಕ, ಅಮರೇಶ ನಂದಿಕೋಲ, ರಾಜಶೇಖರ ಪಾಟೀಲ್, ರವಿಚಂದ್ರ ಎದರುಮನಿ, ಸತೀಶ ಪಂಚಭಾವಿ, ಸುನೀಲ್ ಗಣಚಾರಿ, ಅಪ್ಪಣ್ಣ ದಶವಂತ, ರಾಘವೇಂದ್ರ ಮತ್ತು ಲಿಯಾಖತ್ ಇತರರಿದ್ದರು.
ಎರಡು ದಿನ ಹಿಂದೆ ಪೌರ ಕಾರ್ಮಿಕರಿಗಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ವೇದಿಕೆ ಮೇಲೆ ಬಹುಮಾನ ವಿತರಣೆ ಮಾಡಲಾಯಿತು. ನಿತ್ಯ ಕಾಯಕದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರು ಇಂದು ಶ್ವೇತ ಬಣ್ಣದ ಸಮವಸ್ತ್ರ ಧರಿಸಿ ಸಂತಸದಿಂದ ಭಾಗವಹಿಸಿರುವದು ಕಂಡು ಬಂದಿತು.