ಪ್ರಮುಖ ಸುದ್ದಿ

ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಲಂಹುಸೇನಿ

ಪೌರಕಾರ್ಮಿಕರನ್ನು ಯೋಧರಂತೆ ಕಾಣಿ – ಶಾಲಂ ಹುಸೇನಿ

yadgiri,ಶಹಾಪುರ: ನಗರವನ್ನು ಸ್ವಚ್ಛ ಸುಂದರವನ್ನಾಗಿ ಮಾಡುವಲ್ಲಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಯೋಜನಾ ನಿರ್ದೇಶಕ (ನಗರಾಭಿವೃದ್ಧಿ ಕೋಶ) ಶಾಲಂ ಹುಸೇನಿ ತಿಳಿಸಿದರು.

ನಗರದ ಟೌನ್‍ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದಿಂದ ಆಯೋಜಿತವಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಸೇವಾನೌಕರರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸೇವೆಯೊಂದೇ ಅವರ ಮೂಲ ಧ್ಯೇಯವಾಗಿಟ್ಟುಕೊಂಡಿರುವ ಪೌರಕಾರ್ಮಿಕರು ಯಾವಾಗಲೂ ಸಾಕಷ್ಟು ನೋವು-ನಲಿವುಗಳನ್ನುಂಡು ಕರ್ತವ್ಯದಲ್ಲಿದ್ದಾರೆ. ಅವರಿಗೆ ದೊರಕುವ ಸೌಲಭ್ಯಗಳನ್ನು ದೊರಕಿಸುವುದು ಮತ್ತು ಪೌರಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಅವಕಾಶಗಳನ್ನು ಕಲ್ಪಿಸಲಾಗುವುದು. ಪೌರಕಾರ್ಮಿಕರು ಸಹ ಸೇನಾನಿಗಳಿದ್ದಂತೆ. ನಗರದ ಸುಂದರೀಕರಣಕ್ಕೆ ಯುದ್ಧೋಪಾದಿಯಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸವನ್ನು ಮಾಡುತ್ತಾರೆ. ಅವರ ಸುರಕ್ಷತೆ ನಮ್ಮೆಲ್ಲರ ಜವಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅವರಿಗೆ ಸುರಕ್ಷತೆ ದೃಷಿಯಿಂದ ದೊರೆಯಬೇಕಾದ ಸೌಲಭ್ಯವನ್ನು ಕಲ್ಪಿಸಲಾಗುವದು ಎಂದರು.

ಸಮುದಾಯ ಸಂಘಟನಾ ಅಧಿಕಾರಿ ದೇವಿಂದ್ರ ಹೆಗಡೆ ಮಾತನಾಡಿ, ಪೌರಕಾರ್ಮಿಕರಿಗೆ ಅವರ ದಿನಾಚರಣೆ ಆಚರಿಸಿಕೊಳ್ಳುವುದು ಒಂದು ದೊಡ್ಡ ಹಬ್ಬ, ಜನರು ಪೌರಕಾರ್ಮಿಕರನ್ನು ಸರಳವಾಗಿ ಕಾಣದಂತೆ ಯೋಧರಂತೆ ಕಾಣಬೇಕು, ಪೌರಕಾರ್ಮಿಕರ ಬಗ್ಗೆ ಕೇವಲ ಅವರ ಸೇವಾಕಾರ್ಯ ನೋಡಿ ಅನುಕಂಪ ತೋರಿಸದೆ, ಅವರಿಗೆ ಅವಕಾಶಗಳನ್ನು ನೀಡಬೇಕು.

ನೌಕರರ ಸೇವೆ, ಖಾಯಂ ಸೇವಾ ಭದ್ರತೆ, ಆರೋಗ್ಯ ಸುರಕ್ಷತೆ, ಸೇರಿದಂತೆ ಪ್ರತಿಯೊಂದು ಅವಕಾಶಗಳನ್ನು ಕಲ್ಪಿಸುವಲ್ಲಿ ಹಿರಿಯ ಅಧಿಕಾರಿಗಳು ಸಹಾನುಭೂತಿ ತೋರಬೇಕು. ಇದರ ಜೊತೆಗೆ ಪೌರಕಾರ್ಮಿಕರದ್ದು ದೊಡ್ಡ ಜವಬ್ದಾರಿ ಇದೆ. ದುಶ್ಚಟಗಳಿಗೆ ಮಾರು ಹೋಗದೆ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ನಗರಸಭೆ ಹಂಗಾಮಿ ಅಧ್ಯಕ್ಷೆ ಭೀಮಬಾಯಿ ದೇವಿಂದ್ರಪ್ಪ, ಪೌರಾಯುಕ್ತ ಓಂಕಾರ ಪೂಜಾರಿ, ಪೌರಸೇವಾ ನೌಕರ ಸಂಘದ ಅಧ್ಯಕ್ಷ ನಾಗಣ್ಣ ಕೆಂಭಾವಿ, ಸೈಯದ್ ಮುಸ್ತಫಾ ದರ್ಬಾನ್, ಲಾಲಅಹ್ಮದ ಖುರೇಶಿ, ಆರ್.ಐ.ಹಣಮಂತ ಮಿಲ್ಟ್ರಿ, ಮನೋಜಕುಮಾರ ಗುರಿಕಾರ, ದೇವಪ್ಪ ಗುಡಿ, ದುರ್ಗಪ್ಪ ನಾಯಕ, ಹಣಮಂತ ಯಾದವ ಉಪಸ್ಥಿತರಿದ್ದರು.

ಶಿವಕುಮಾರ ಸಜ್ಜನ್, ಶರಣು, ಮಾನಪ್ಪ ಸೇರಿದಂತೆ ಅಧಿಕಾರಿಗಳು, ನಗರಸಭೆ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಸ್ತ ಪೌರಕಾರ್ಮಿಕರಿಗೆ ಪೌರಸಿಬ್ಬಂಧಿ ವರ್ಗದವರಿಗೆ, ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಶಿಕ್ಷಣದಲ್ಲಿ ಸಾಧನೆಗೌದ ಪೌರಸೇವಾ ನೌಕರರ ಮಕ್ಕಳಿಗೆ ಗೌರವಿಸಲಾಯಿತು. ಪೌರಕಾರ್ಮಿಕರಿಗೆ ವಾರ್ಷಿಕ ಭತ್ಯೆ ಚೆಕ್ ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button