ಪ್ರಮುಖ ಸುದ್ದಿ
ಮಾಜಿ ರಾಷ್ಟ್ರಪತಿ ಮುಖರ್ಜಿಗೂ ಕೊರೊನಾ ಪಾಸಿಟಿವ್ ದೃಢ
ಮಾಜಿ ರಾಷ್ಟ್ರಪತಿ ಮುಖರ್ಜಿಗೂ ಕೊರೊನಾ ಪಾಸಿಟಿವ್ ದೃಢ
ನವದೆಹಲಿಃ ದೇಶದ ಹಲವಾರು ಜನಪ್ರತಿನಿಧಿಗಳಿಗೆ ಕೊರೊನಾ ಸೋಂಕು ತಗುಲಿರುವದು ಗೊತ್ತಿರುವ ವಿಷಯ. ಅದರಂತೆ ಈಗ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ಕುರಿತು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, ಎಂದಿನಂತೆ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ, ಕೊರೊನಾ ಟೆಸ್ಟ್ ಮಾಡಲಾಗಿ ತಮಗೂ ಪಾಸಿಟಿವ್ ಇರುವ ಕುರಿತು ವೈದ್ಯರು ತಿಳಿಸಿದ್ದಾರೆ.
ಹೀಗಾಗಿ ಕಳೆದ ವಾರದಿಂದ ನನ್ನ ಸಂಪರ್ಕದಲ್ಲಿರುವವರು ಕೋರೊನಾ ಟೆಸ್ಟ್ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. ರೋಗ ಲಕ್ಷಣಗಳು ಕಾಣದಿದ್ದರೆ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯಿರಿ ಎಂದು ಅವರು ಟ್ವಿಟ್ ಮಾಡಿದ್ದಾರೆ.