ಪ್ರಮುಖ ಸುದ್ದಿ
ಬಾಗಲಕೋಟೆಯಲ್ಲಿ ಹೆಚ್ಚಿಸಿದ ರೂಪಾಂತರ ಕೊರೊನಾ ಆತಂಕ
ಬಾಗಲಕೋಟೆಯಲ್ಲಿ ಹೆಚ್ಚಿಸಿದ ರೂಪಾಂತರ ಕೊರೊನಾ ಆತಂಕ
ಬಾಗಲಕೋಟೆಃ ರಾಜ್ಯದಲ್ಲಿ ರೂಪಾಂತರ ಕೊರೊನಾ ಆತಂಕ ದಿನೆ ದಿನೇ ಹೆಚ್ಚಾಗುತ್ತಿದ್ದು, ಲಂಡನ್ ಮೂಲಕ ವಾರದ ಹಿಂದೆ ಇಲಕಲ್ ಗೆ ಬಂದಿದ್ದ 27 ವರ್ಷದ ಯುವತಿ ಸೇರಿದಂತೆ ಜಮಖಂಡಿಗೆ ಬಂದಿದ್ದ ಅತ್ತೆ ಮತ್ತು ಸೊಸೆಗೂ ಕೊರೊನಾ ಕಾಣಿಸಿಕೊಂಡಿದ್ದು, ರೂಪಾಂತರಿ ಕೊರೊನಾ ಇರಬಹುದೇ ಎಂಬ ಆತಂಕ ಹೆಚ್ಚಾಗಿದೆ.
ಲಂಡನ್ ನಿಂದ ಜಮಖಂಡಿಗೆ ಬಂದಿದ್ದ ಅತ್ತೆ ಮತ್ತು ಸೊಸೆಯಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಮತ್ತು ಲಂಡನ್ ನಿಂದ ಇಲಕಲ್ ಗೆ ಬಂದಿದ್ದ ಯುವತಿಯಲ್ಲೂ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಬಾಗಲಕೋಟ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ.
ಹೊಸ ಪ್ರಭೇಧ ಪಡೆದ ಕೊರೊನಾವೇ ಇವರಿಗೆ ತಗುಲಿದೆಯೋ ಇಲ್ಲವೋ ಎಂಬುದು ಸ್ಪಷ್ಟತೆ ಇಲ್ಲ. ಈ ಕುರಿತು ಹೆಚ್ಚಿನ ಪರಿಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರವೇ ಗೊತ್ತಾಗಲಿದೆ.
ರೂಪಾಂತರ ವೈರಸ್ ಕುರಿತು ಪರೀಕ್ಷೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗುವದು ಎಂದು ಡಿಎಚ್ ಓ ಅನಂತ್ ದೆಸಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.