ರಾಜಾಜ್ಞೆಗೆ ತಕ್ಕ ಸಮಯ ತಕ್ಕಪಾಠ ಕಲಿಸಿದ ಮಂತ್ರಿ

ತಕ್ಕ ಸಮಯ
ಬೇಸಿಗೆ ಸಮಯ ಮಳೆಗೆ ಆಹ್ವಾನ – ಸೀತಾಫಲ ಹಣ್ಣು ಅಗತ್ಯ ಏಕೆ.?
ದೀಪನಗರದ ರಾಜ ಚಂದ್ರವರ್ಮನಿಗೆ ಆಗಾಗ್ಗೆ ವಿಚಿತ್ರ ಕೋರಿಕೆಗಳು ಹುಟ್ಟಿಕೊಳ್ಳುತ್ತಿದ್ದವು. ಒಂದು ದಿನ ರಾಜಸಭೆ ನಡೆಯುತ್ತಿರುವಾಗ ರಾಜನು ಮಂತ್ರಿಯನ್ನು ಕುರಿತು ಮಂತ್ರಿ ಈ ದಿನ ಮಧ್ಯಾಹ್ನ ಭಾರಿ ಮಳೆ ಬರಿಸಬೇಕು. ಇಲ್ಲವಾದರೆ ನಿನ್ನನ್ನು ಗಲ್ಲು ಶಿಕ್ಷೆಗೆ ಗುರಿಮಾಡುವೆನು ಎಂದು ಅಪ್ಪಣೆ ಮಾಡಿದನು.
ಅದು ಬೇಸಿಗೆ ಕಾಲ. ಬಿಸಿಲು ಅಪಾರವಾಗಿತ್ತು ಈ ಗಂಡಾಂತರದಿಂದ ಪಾರಾಗಲು ಮಹಾರಾಜ ತಮ್ಮ ಆಜ್ಞೆಯ ಪ್ರಕಾರವೇ ಮಳೆಯನ್ನು ಬರಿಸುತ್ತೇನೆ. ಕನಕದುರ್ಗದೇವಿಯ ಪೂಜೆ ಮಾಡಬೇಕು ಪೂಜಾಸಾಮಗ್ರಿಗಳಿಗೆ ತಕ್ಕ ಏರ್ಪಾಡು ಮಾಡಿಸಿಬಿಡಿ ಎಂದನು. ಮಂತ್ರಿಯು ಹೇಳಿದಂತೆ ಮಹಾರಾಜನು ಪೂಜೆಗೆ ಬೇಕಾದ ಎಲ್ಲಾ ಏರ್ಪಾಟು ಮಾಡಿದನು.
ಸ್ವಲ್ಪ ಸಮಯದ ನಂತರ ಮಂತ್ರಿಯು ರಾಜನ ಹತ್ತಿರ ಬಂದು ಮಹಾರಾಜ ಪೂಜೆ ಮುಗಿದ ಮೂರು ಘಳಿಗೆಗೆ ಮಳೆ ಹುಯ್ಯುವುದು. ಈ ಪೂಜೆಗೆ ಸೀತಾಫಲದ ಹಣ್ಣು ನೈವೇದ್ಯವಾಗಬೇಕು.
ಹತ್ತು ಸೀತಾಫಲದ ಹಣ್ಣುಗಳನ್ನು ತರಿಸಿಕೊಡಿ ಎಂದನು ಮಂತ್ರಿ ಮಹಾರಾಜ ಕೋಪಗೊಂಡು ಬುದ್ಧಿ ಇದೆಯೇನಯ್ಯ ನಿನಗೆ ಈ ಬೇಸಿಗೆಯಲ್ಲಿ ಸೀತಾಫಲ ಎಲ್ಲಯ್ಯ ಸಿಗುತ್ತೇ? ಯಾವುದಕ್ಕೂ ತಕ್ಕ ಸಮಯವಿಲ್ಲವೇ? ಎಂದು ಅಬ್ಬರಿಸಿದನು.
ಮಹಾಸ್ವಾಮಿಯವರು ಸೀತಾಫಲಕ್ಕೆ ಕಾಲದ ಮಾತನಾಡಿದರೆ ಬೇಸಿಗೆಯಲ್ಲಿ ಮಳೆ ಬರಿಸುವುದಾದರು ಹೇಗೆ? ಎಂದು ಮರು ಪ್ರಶ್ನೆ ಹಾಕಿದನು. ರಾಜನಿಗೆ ತನ್ನ ತಪ್ಪಿನ ಅರಿವಾಯಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.