ರಾಜಕೀಯ ಪಕ್ಷ ಕಟ್ಟಲ್ಲಃ ನಟ ರಜನಿಕಾಂತ್ ಟ್ವಿಟ್ ಮೂಲಕ ಕ್ಷಮೆ
ರಾಜಕೀಯ ಪಕ್ಷ ಕಟ್ಟಲ್ಲಃ ನಟ ರಜನಿಕಾಂತ್ ಟ್ವಿಟ್ ಮೂಲಕ ಕ್ಷಮೆ
ರಜನಿ ರಾಜಕೀಯಕ್ಕೆ ಅನಾರೋಗ್ಯ ಕಾರಣವೇ.?
ವಿವಿ ಡೆಸ್ಕ್ಃ ಯಾವುದೇ ರಾಜಕೀಯ ಪಕ್ಷ ಕಟ್ಟುವದಿಲ್ಲ. ಆರೊಗ್ಯ ಸಮಯ ಹಿನ್ನೆಲೆ ರಾಜಕೀಯಕ್ಕೆ ಬರಲ್ಲ ಎಂದು ತಮಿಳುನಾಡಿನ ಖ್ಯಾತ ನಟ ರಜನಿಕಾಂತ್ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ
ಇಚೆಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕಳೆದ ಹಲವಾರು ವರ್ಷಗಳಿಂದ ಅವರು ರಾಜಕೀಯ ಎಂಟ್ರಿ ಕುರಿತು ಚರ್ಚೆಯೇ ನಡೆಯುತ್ತಲೇ ಬಂದಿತ್ತು. ಅಲ್ಲದೆ ಸ್ವತಃ ಅವರು ಸಹ ರಾಜಕೀಯ ಎಂಟ್ರಿ ಕುರಿತು ಹೇಳಿಕೆಯನ್ನು ನೀಡಿದ್ದರು.
ಇನ್ನೇನು ಎಲ್ಲಾ ಚನ್ನಾಗಿದ್ದರೆ ಹೊಸ ವರ್ಷಕ್ಕೆ ಹೊಸ ಪಕ್ಷ ಉದಯವಾಗಲಿತ್ತು. ಅದಕ್ಕೆ ಬೆಕಾದ ಸಿದ್ಧತೆಯೂ ಮಾಡಲಾಗಿತ್ತು.ಆದರೆ ಅನಾರೋಗ್ಯ ಹಿನ್ನೆಲೆ ರಾಜಕೀಯದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಟ್ವಿಟ್ ಮೂಲಕ ತಮಿಳುನಾಡಿನ ಜನತೆಗೆ ಕ್ಷಮೆಯನ್ನು ಅವರು ಕೋರಿದ್ದಾರೆ.
ಆದರೆ ಹೊಸ ಪಕ್ಷ ಉದಯಕ್ಕೆ ಎಲ್ಲಾ ತಯಾರಿ ನಡೆಸಿದ್ದು, ಏಕಾಏಕಿ ರಾಜಕೀಯದಿಂದ ಹಿಂದೆ ಸರಿಯುವಲ್ಲಿ ಬರಿ ಅನಾರೋಗ್ಯ ಕಾರಣವಾ.? ಅಥವಾ ಬೇರೆ ಎನಾದರೂ ಅಡಗಿದೆಯಾ ಎಂದು ಎಂಬ ಸಂಶಯವು ಎಡೆ ಮಾಡಿದ್ದು, ಜನರಲ್ಲಿ ಹಲವಾರು ಉಹಾಪೋಹ ಸುದ್ದಿ ಕೇಳಿ ಬರುತ್ತಿವೆ. ಯಾವುದಕ್ಕೂ ಸಮಯವೇ ಉತ್ತರಿಸಲಿದೆ ಎನ್ನಲಾಗಿದೆ.