ಪ್ರಮುಖ ಸುದ್ದಿ
ಕ್ಷಮೆ ಕೇಳುವಂತ ಮಾತು ನಾನಾಡಿಲ್ಲ – ರಾಕ್ಲೈನ್ ವೆಂಕಟೇಶ
ಕ್ಷಮೆ ಕೇಳುವಂತ ಮಾತು ನಾನಾಡಿಲ್ಲ – ರಾಕ್ಲೈನ್ ವೆಂಕಟೇಶ
ಬೆಂಗಳೂರಃ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ನಾನು ಕ್ಷಮೆ ಕೇಳುವಂತ ಹೇಳಿಕೆ ನೀಡಿಲ್ಲ. ಅವರ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಅದ್ಯಾವ ಕಾರಣಕ್ಕೆ ನನ್ನ ಮನೆ ಮುಂದೆ ಪ್ರತಿಭಟನೆಗೆ ಇಳಿದಿದ್ದಾರೋ ಗೊತ್ತಿಲ್ಲ ಎಂದು ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ ತಿಳಿಸಿದರು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನಾನ್ಯಾವತ್ತು ರಾಜಕೀಯವಾಗಿ ಮಾತನಾಡಿಲ್ಲ. ಅಂಬರೀಶ್ ಅವರು ನನ್ನಗೆ ಅತ್ಯಾತ್ಮೀಯರು ಅವರ ಬಗ್ಗೆ ಹಗುರವಾಗಿ ಮಾತನಾಡಿದಾಗ ಅವರ ಅಭಿಮಾನಿಗಳಾದ ನಮಗೆ ಸಹಜವಾಗಿ ನೋವಾಗುತ್ತೆ.
ಆ ಹಿನ್ನೆಲೆ ಮಾತನಾಡಿದ್ದೇನೆ. ನಾನ್ಯಾವ ಕ್ಷಮೆ ಕೇಳುವಂತ ತಪ್ಪು ಮಾತನಾಡಿಲ್ಲ. ಆಡಿದ್ದರೆ ಹೇಳಲಿ. ಆವೇಶದಲ್ಲಿ ತಪ್ಪು ಮಾತಾಡಿದ್ದರೆ ಕ್ಷಮೆ ಕೇಳಬಹುದು. ನಾನು ತಪ್ಪು ಹೇಳಿಕೆ ನೀಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಮೇಯವೇ ಬರುವದಿಲ್ಲ ಎಂದಿದ್ದಾರೆ.