ಪ್ರಮುಖ ಸುದ್ದಿ
ತಿಮ್ಮಕ್ಕ ಗುಣಮುಖಃ ಚಿಕಿತ್ಸೆ ನೀಡಿ ಊಟದ ವ್ಯವಸ್ಥೆ ಮಾಡಿದ್ದ ವೈದ್ಯೆ ಸೌಮ್ಯಮಣಿ.!
ಹಾಸನಃ ಕಳೆದ ಐದು ದಿನಗಳಿಂದ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಸಾಲು ಮರದ ತಿಮ್ಮಕ್ಕ ಇದೀಗ ಗುಣಮುಖ ರಾಗಿರುವ ಹಿನ್ನೆಲೆ ಮಂಗಳವಾರ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ತೀವ್ರಹೊಟ್ಟೆ ನೋವು, ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದ ಹಿನ್ನೆಲೆ ಅವರ ಸಾಕುಮಗ ಉಮೇಶ ನಗರದ ಮಣಿ ಸ್ಪೇಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು.
ಸೂಕ್ತ ಚಿಕಿತ್ಸೆ ನೀಡಿ ಅಲ್ಲದೆ ತಮ್ಮ ಮನೆಯಿಂದಲೇ ಸಾಲುಮರದ ತಿಮ್ಮಕ್ಕಗೆ ಊಟದ ವ್ಯವಸ್ಥೆ ಮಾಡಿದ ವೈದ್ಯೆ ಸೌಮ್ಯ ಮಣಿ ಔದಾರ್ಯ ಮೆರೆದಿದ್ದಾರೆ. ಲಾಕ್ ಡೌನ್ ಜಾರಿಯಿಂದಾಗಿ ಹೊಟೇಲ್, ಖಾನಾವಳಿಗಳು ಬಂದ್ ಇರುವ ಕಾರಣ ಕಾಳಜೀಪೂರ್ವಕವಾಗಿ ವೈದ್ಯೆ ಸೌಮ್ಯ ತಿಮ್ಮಕ್ಕಗೆ ತಮ್ಮ ಮನೆಯಿಂದಲೇ ಊಟದ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ.
ವಾರದ ಬಳಿಕೆ ಮತ್ತೊಮ್ಮೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕೆಂದು ವೈದ್ಯೆ ತಿಳಿಸಿದ್ದಾರೆ. ದತ್ತು ಮಗ ಉಮೇಶ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿ ತಾಯಿ ತಿಮ್ಮಕ್ಕಳೊಂದಿಗೆ ಮನೆಗೆ ತೆರಳಿದ್ದಾರೆ.