ಶಹಾಪುರಃ ಸಗರ ಗ್ರಾಮದಲ್ಲಿ ವಾರದ ಸಂತೆಗಿಲ್ಲ ನಿರ್ಬಂಧ
ಸಗರನಲ್ಲಿ ವಾರದ ಸಂತೆಯಲ್ಲಿ ಜನ ಜಂಗುಳಿ
yadgiri, ಶಹಾಪುರಃ ತಾಲೂಕಿನ ಸಗರ ಗ್ರಾಮದಲ್ಲಿ ರವಿವಾರ ವಾರದ ಸಂತೆ ಕೊರೊನಾ ನಿಯಮಗಳನ್ನು ಮೀರಿ ಎಗ್ಗಿಲ್ಲದೆ ನಡೆದಿರುವದು ಕಂಡು ಬಂದಿತು. ಸರ್ಕಾರ ರವಿವಾರವೇ ಎಲ್ಲಾ ವಾರದ ಸಂತೆಗಳಿಗೆ ನಿರ್ಬಂಧ ಆದೇಶ ಹೊರಡಿಸಿ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿತ್ತು.
ಆದರೆ ಇಲ್ಲಿ ಯಾವುದೇ ಕೊರೊನಾ ನಿಯಮಗಳ ಮಾರ್ಗಸೂಚಿಯಂತೆ ಕಾರ್ಯರ್ನಿಹಿಸದೆ ಮಾಸ್ಕ್ ಇಲ್ಲದೆ, ಅಂತರ ಕಾಪಾಡಿಕೊಳ್ಳದೆ ಬೇಕಾಬಿಟ್ಟಿಯಾಗಿ ತರಕಾರಿ ಸಂತೆ ಜರುಗಿತು. ಪೊಲೀಸರ ಮಾತಿಗೂ ಕ್ಯಾರೆ ಅನ್ನ ಜನರು ವಾರದ ಸಂತೆಯಲ್ಲಿ ಬ್ಯುಸಿಯಾಗಿದ್ದರು.
ಸ್ಥಳೀಯ ಗ್ರಾಮ ಪಂಚಾಯತ್ ನಿರ್ಲಕ್ಷದಿಂದಾಗಿ ವಾರದ ಸಂತೆ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಗ್ರಾಮದಲ್ಲಿ ಯಾವುದೇ ಸರ್ಕಾರದ ಆದೇಶ ಮಾಹಿತಿ ನೀಡಿರುವದಿಲ್ಲ. ದಿವ್ಯ ನಿರ್ಲಕ್ಷದಿಂದಾಗಿ ಜನ ಮನಬಂದಂತೆ ವರ್ತಿಸುತ್ತಿದ್ದಾರೆ. ಕೇವಲ ಪೊಲೀಸ್ ಸಿಬ್ಬಂದಿ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಇರುವ ಇಬ್ಬರು ಪೊಲೀಸ್ ಸಿಬ್ಬಂದಿ ಏಣು ಮಾಡಿಯಾರು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಗ್ರಾಪಂ ಆಡಳಿತ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಜನರ ಬೇಡಿಕೆಗೆ ಸ್ಪಂಧಿಸುತ್ತಿಲ್ಲ ಅಲ್ಲದೆ ಕೊರೊನಾ ಕಫ್ರ್ಯೂ ಜಾರಿಯಾಗಿ ಐದು ದಿನಗಳ ಕಳೆದರೂ ಯಾವೊಂದು ಮಾಹಿತಿ ನೀಡದೆ ಪಿಡಿಓ ಕರ್ತವ್ಯಕ್ಕೂ ಹಾಜರಾಗದೆ ನಿರ್ಲಕ್ಷವಹಿಸಿದ್ದಾರೆ ಎಂದು ಸ್ಥಳೀಯ ಯುವಕರು ಆರೋಪಿಸಿದ್ದಾರೆ.
ಸಗರನಲ್ಲಿ ಗ್ರಾಪಂ ಅಧಿಕಾರಿ ಜನರ ಕೈಗೆ ಸಿಗುವದಿಲ್ಲ. ಯಾವುದೇ ಸರ್ಕಾರಿ ಆದೇಶಗಳನ್ನು ಪಾಲಿಸದೆ ನಿರ್ಲಕ್ಷವಹಿಸಿದ್ದಾರೆ. ಸಿಂದಗಿ ತಾಲೂಕಿನವರಾದ ಪಿಡಿಓ ಅವರು ಗ್ರಾಮಕ್ಕೆ ಬರುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿವೆ.
ಕೊರೊನಾ ನಿಯಂತ್ರಣಕ್ಕೆ ಯಾವುದೇ ಮುಂಜಾಗೃತ ಕ್ರಮಗಳನ್ನು ಕಾರ್ಯಕ್ರಮಗಳನ್ನು ಪಿಡಿಓ ಹಮ್ಮಿಕೊಂಡಿರುವದಿಲ್ಲ ಎಂದು ಆಪಾದನೆಗಳು ಬಂದಿವೆ.