ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಅದೆಷ್ಟು ಲಾಭಕರ !
ತಾಮ್ರಜಲದ ಆಯುರ್ವೇದಿಕ ಲಾಭ
ತಾಮ್ರದ ಸ್ವಚ್ಛ ಪಾತ್ರೆಯಲ್ಲಿ ೨ ಗಂಟೆಗಿಂತ ಹೆಚ್ಚು ಕಾಲ ಇಟ್ಟ ನೀರಿಗೆ ‘ತಾಮ್ರಜಲ’ ಎನ್ನುತ್ತಾರೆ. ‘ರಸರತ್ನ ಸಮುಚ್ಚಯ’ ಇದು ಆಯುರ್ವೇದದ ರಸ ಶಾಸ್ತ್ರ ವಿಷಯದ ಒಂದು ಪ್ರಮಾಣೀಕೃತ ಸಂಸ್ಕೃತ ಗ್ರಂಥವಿದೆ. ಇದರ ಐದನೇ ಅಧ್ಯಾಯದ ೪೬ ನೇ ಶ್ಲೋಕದಲ್ಲಿ ತಾಮ್ರ ಈ ಧಾತುವಿನ ಮುಂದಿನ ಗುಣಧರ್ಮಗಳನ್ನು ಕೊಡಲಾಗಿದೆ –
ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ದಪ್ಪತನ, ಮೂಲವ್ಯಾಧಿ, ಕ್ಷಯ(ಟಿ.ಬಿ.), ಪಾಂಡುರೋಗ (ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು, ಅನಿಮಿಯಾ) ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹಸಿವು ಹೆಚ್ಚಿಸಲು ಹಾಗೂ ಕಣ್ಣುಗಳಿಗೆ ಅತ್ಯಂತ ಹಿತಕರವಾಗಿದೆ.’ ತಾಮ್ರದಿಂದ ರಕ್ತಾಭಿಸರಣದ ಸಮಸ್ಯೆಗಳು ನಿವಾರಣೆಯಾಗಿ ರಕ್ತಾಭಿಸರಣ ಸುಧಾರಣೆಯಾಗುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಉತ್ತಮವಾಗಿರುತ್ತದೆ. ಕಾಂತಿಯು ಸತೇಜವಾಗುತ್ತದೆ. ಈ ಎಲ್ಲ ಲಾಭಗಳು ಸ್ವಚ್ಛ ಲಕಲಕ ಹೊಳೆಯುವ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನ ನಿಯಮಿತ ಬಳಕೆಯಿಂದಲೂ ಲಭಿಸುತ್ತವೆ.
ತಾಮ್ರ ಜಲದಂತೆಯೇ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರೂ ಶರೀರಕ್ಕೆ ಲಾಭದಾಯಕವಿದೆ. ಹಿತ್ತಾಳೆ ಇದು ತಾಮ್ರ ಹಾಗೂ ಗಂಧಕ (ಝಿಂಕ್) ಇವುಗಳ ಮಿಶ್ರಧಾತು ಇದೆ. ಗಂಧಕವು ಶರೀರದಲ್ಲಿಯ ಅನೇಕ ಕ್ರಿಯೆಗಳಿಗಾಗಿ ಅಗತ್ಯವಿರುತ್ತದೆ. ಗಂಧಕದ ಪ್ರಮಾಣವು ಕಡಿಮೆಯಾಗುವುದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕಡಿಮೆ ಯಾಗುತ್ತದೆ. ಹಾಲು ಕುಡಿಸುವ ಮಾತೆಯರಿಗೆ ಗಂಧಕದ ಅಗತ್ಯವು ಹೆಚ್ಚು ಪ್ರಮಾಣದಲ್ಲಿರುತ್ತದೆ.
ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನ ಮೇಲೆ ಆಗಿರುವ ಆಧುನಿಕ ಸಂಶೋಧನೆ
ಅ. ಪಿತಾಂಬರಿ ಪ್ರಾಡಕ್ಟಸ್ ಪ್ರೈ.ಲಿ. ಈ ಕಂಪನಿಯು ತಾಮ್ರದ ಔಷಧಿ ಗುಣಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಲು ವಿವಿಧ ಪರೀಕ್ಷೆಗಳನ್ನು ಮಾಡಿತು. ಅದರಲ್ಲಿ ಈ. ಕೊಲಾಯ್ (E. coli) ಎಂಬ ಬೇಧಿಗೆ ಕಾರಣವಾಗಿರುವ ಜೀವಾಣು ತಾಮ್ರದ ಸಂಪರ್ಕದಲ್ಲಿದ್ದರೆ ಎರಡೂವರೆ ಗಂಟೆಗಳಲ್ಲಿಯೇ ನಾಶವಾಗುತ್ತದೆ, ಎಂದು ಕಂಡುಬಂದಿತು.
ಆ. ಇಂಗ್ಲೆಂಡಿನ ನೇಚರ್ ಈ ವಿಜ್ಞಾನ ಹಾಗೂ ಸಂಶೋಧನೆ ವಿಷಯದ ಮಾಸಿಕವು ನಾರ್ಥಂಬ್ರಿಯಾ ವಿಶ್ವ ವಿದ್ಯಾಲಯದ ಡಾ. ರೀಡ್ ಈ ಸೂಕ್ಷ್ಮ ಜೀವಶಾಸ್ತ್ರಜ್ಞರ ಸಂಶೋಧನೆಯ ಮಾಹಿತಿ ಪ್ರಕಟಿಸಿದ್ದಾರೆ. ಡಾ. ರೀಡ್ ಇವರು ಹಿತ್ತಾಳೆಯ ಹಾಗೂ ಮಣ್ಣಿನ ಪಾತ್ರೆಯಲ್ಲಿನ ನೀರಿನಲ್ಲಿ ಈ. ಕೊಲಾಯ್ ಈ ಬೇಧಿಯ ಜಂತು ಬಿಟ್ಟರು ಹಾಗೂ ಎರಡೂ ಪಾತ್ರೆಯಲ್ಲಿನ ನೀರನ್ನು ೬, ೨೪ ಹಾಗೂ ೪೮ ಗಂಟೆಗಳ ನಂತರ ಪರೀಕ್ಷೆ ಮಾಡಿದರು. ಆ ಪರಿಶೀಲನೆಯಲ್ಲಿ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಲ್ಲಿ ಈ. ಕೊಲಾಯ್‌ನ ಜಂತುಗಳ ಪ್ರಮಾಣವು ಶೀಘ್ರವಾಗಿ ಕಡಿಮೆಯಾಗುತ್ತದೆ, ಎಂಬುದು ಗಮನಕ್ಕೆ ಬಂದಿತು.
ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿ ನೀರು ಶೇಖರಿಸುವ ಮೊದಲು ಆ ಪಾತ್ರೆಗಳನ್ನು ಸ್ವಚ್ಛ ತೊಳೆಯುವುದು ಅಗತ್ಯವಿದೆ !
ನಾವು ನೀರನ್ನು ಸಂಗ್ರಹಿಸಿಡಲಿರುವ ತಾಮ್ರ ಹಿತ್ತಾಳೆಯ ಪಾತ್ರೆಯನ್ನು ಪ್ರತಿದಿನ ಸ್ವಚ್ಛವಾಗಿ ತೊಳೆಯುವುದು ಆವಶ್ಯಕವಾಗಿದೆ. ಪಾತ್ರೆ ಸ್ವಚ್ಛ ತೊಳೆಯದಿದ್ದರೆ ಹವೆಯಲ್ಲಿನ ಪ್ರಾಣವಾಯುವಿನ ಸಂಪರ್ಕದಿಂದ ತಾಮ್ರವು ಆಕ್ಸಾಯಿಡ್ ಆಗುತ್ತದೆ ಹಾಗೂ ಅದರ ಪದರಿನಿಂದಾಗಿ ತಾಮ್ರದ ಗುಣಧರ್ಮವು ನೀರಲ್ಲಿ ಇಳಿಯುವುದಿಲ್ಲ ಹಾಗೂ ನೀರು ಬಳಸಲು ಅಯೋಗ್ಯವಾಗುತ್ತದೆ.
ಕುಡಿಯುವ ನೀರು ತಂಗಳು ಇರಬಾರದು !
೨೪ ಗಂಟೆಗಳ ನಂತರ ಒಂದು ಪಾತ್ರೆಯಲ್ಲಿ ಶೇಖರಿಸಿಟ್ಟ ನೀರು ತಂಗಳು ಆಗುತ್ತದೆ. ಇಂತಹ ನೀರು ಕುಡಿಯುವುದರಿಂದ ವಾತ, ಪಿತ್ತ ಹಾಗೂ ಕಫ ಈ ಮೂರೂ ದೋಷಗಳು ಹೆಚ್ಚುತ್ತವೆ. ಇದಕ್ಕಾಗಿ ತಾಮ್ರದ ಪಾತ್ರೆಯಲ್ಲಿನ ನೀರನ್ನು ಕೂಡ ೨೪ ಗಂಟೆಗಳ ನಂತರ ಬದಲಾಯಿಸಬೇಕು. – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಕೃಪೆಃ SanatanPanchanga.