ಶಹಾಪುರದಲ್ಲಿ ಶರಣಬಸವೇಶ್ವರ ಸಂಭ್ರಮ ರಥೋತ್ಸವ
yadgiri, ಶಹಾಪುರಃ ರವಿವಾರ ಸಂಜೆ ನಗರದ ದಿಗ್ಗಿಬೇಸ್ ಬಳಿ ಇರುವ ಶ್ರೀ ಶರಣಬಸವೇಶ್ವರ ಮಠದಿಂದ ಗಾಂಧಿ ವೃತ್ತದ ಬಳಿಯ ಗುಗ್ಗಳ ಬಸವೇಶ್ವರರ ದೇವಸ್ಥಾನದವರೆಗೆ ಶ್ರೀಶರಣಬಸವೇಶ್ವರರ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.
ರಥೋತ್ಸವ ಹಿನ್ನೆಲೆ ಭಕ್ತಾಧಿಗಳು ಶ್ರೀಮಠದ ಕರ್ತೃ ಗದ್ದುಗೆಗೆ ನೈವೇದ್ಯ, ಕಾಯಿ ಕರ್ಪೂರ ಸಮರ್ಪಿಸಿ ದರ್ಶನ ಪಡೆದರು. ಸಂಜೆ ನಡೆದ ರಥೋತ್ಸವದಲ್ಲಿ ಭಕ್ತಾಧಿಗಳು ಭಾಗವಹಿಸಿ ಉತ್ತುತ್ತಿ, ಬಾಳೆ ಹಣ್ಣು, ಮಂಡಕ್ಕಿ ಹಾರಿಸಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಮಹಿಳೆಯರು, ಮಕ್ಕಳು ಹಿರಿಯರು ಪಲ್ಲಕ್ಕಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.