ಪ್ರಮುಖ ಸುದ್ದಿಬಸವಭಕ್ತಿ
ಶಹಾಪುರಃ ಶರಣಬಸವೇಶ್ವರ ರಥೋತ್ಸವ
ಶಹಾಪುರಃ ಶರಣಬಸವೇಶ್ವರ ರಥೋತ್ಸವ
ಶಹಾಪುರಃ ಇಲ್ಲಿನ ದಿಗ್ಗಿಬೇಸ್ ಸಮೀಪದ ಶ್ರೀ ಶರಣಬಸವೇಶ್ವರ ಮಠದಿಂದ ನಗರದ ಗಾಂಧಿಚೌಕ ಹತ್ತಿರದ ಬಸವಣ್ಣ ದೇವಸ್ಥಾನದವರೆಗೆ ಶ್ರೀಶರಣಬಸವೇಶ್ವರ ರಥೋತ್ಸವ ಜರುಗಿತು.
ಭಕ್ತರ ಜಯಘೋಷ ಮಧ್ಯ ರಥೋತ್ಸವಕ್ಕೆ ಶ್ರೀಮಠದ ಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವ ಅಂಗವಾಗಿ ಶ್ರೀಮಠಕ್ಕೆ ಬೆಳಗ್ಗೆಯಿಂದಲೇ ಭಕ್ತಾಧಿಗಳು ಆಗಮಿಸಿ ಶರಣಬಸವೇಶ್ವರರಿಗೆ ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ಪುನೀತರಾದರು.
ಇಂದು ಶುಕ್ರವಾರ ಸಂಜೆ ಜರುಗಿದ ರಥೋತ್ಸವದಲ್ಲಿ ಭಾಗವಹಿಸಿದ ಭಕ್ತ ಸಮೂಹ ತಮ್ಮ ಸಂಕಲ್ಪದೊಂದಿಗೆ ಉತ್ತುತ್ತಿ, ಬಾಳೆಹಣ್ಣು ಎಸೆದು ಕೃತಾರ್ಥರಾದರು.