ಶಿವಮೊಗ್ಗ, ಚಿಕ್ಕಮಗಳೂರಲ್ಲಿ ವಿಚಿತ್ರ ಶಬ್ಧಃ ಮನೆಯಿಂದ ಹೊರ ಓಡಿ ಬಂದ ಜನತೆ
ಶಿವಮೊಗ್ಗ, ಚಿಕ್ಕಮಗಳೂರಲ್ಲಿ ವಿಚಿತ್ರ ಶಬ್ಧಃ ಮನೆಯಿಂದ ಹೊರ ಓಡಿ ಬಂದ ಜನತೆ
ಶಿವಮೊಗ್ಗಃ ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ನಗರದಲ್ಲಿ ವಿಚಿತ್ರ ಶಬ್ಧ ಕೇಳಿಬಂದಿದ್ದು, ಭೂಕಂಪಿಸಿದ ಅನುಭವ ಆದ ಹಿನ್ನೆಲೆ ಜನತೆ ಮನೆಯಿಂದ ಹೊರ ಓಡಿ ಬಂದ ಘಟನೆ ಇದೀಗ ನಡೆದಿದೆ.
ವಿಚಿತ್ರ ಶಬ್ಧ ಶಿವಮೊಗ್ಗ ನಗರದಲ್ಲಿ ಎರಡು ಬಾರಿ ಕೇಳಿ ಬಂದಿದ್ದು ಜನ ಭಯಭೀತರಾಗಿ ಹೊರಗಡೆ ಓಡಿ ಬಂದಿದ್ದಾರೆ. ಭುಮಿ ಕಂಪಿಸಿದ ಅನುಭವ ಆಗಿದೆ ಎಂದು ಕೆಲವರು ಹೇಳಿದರೆ,ಇನ್ನೂ ಕೆಲವರು ಕಂಪನದ ಜೊತೆಗೆ ವಿಚಿತ್ರ ಶಬ್ಧ ಕೇಳಿದ್ದು ಎದೆ ಝಲ್ ಅಂದಿದೆ ಎಂದು ಆತಂಕದಿಂದಲೇ ಹೇಳುತ್ತಿದ್ದಾರೆ.
ವಯಸ್ಸಾದವರು, ಮಕ್ಕಳ ಜೊತೆ ಜನ ರಸ್ತೆ ಮೇಲೆ ಜಮಾವಣೆ ಗೊಂಡಿದ್ದಾರೆ. ಸದ್ಯ ಪೊಲೀಸರು ಜಿಲ್ಲಾಡಳಿತಕ್ಕೆ ವಿಷಯ ತಿಳಿಸಿದ್ದು, ಸೂಕ್ತ ತಜ್ಞರೊಂದಿಗೆ ಈ ಕುರಿತು ಚರ್ಚಿಸಿ ಭೂಕಂಪನ ಕುರಿತು ಸಮರ್ಪಕ ಮಾಹಿತಿ ಪಡೆಯಲಾಗುತ್ತಿದೆ ಎನ್ನಲಾಗಿದೆ.
ಇದೇ ವೇಳೆ ಚಿಕ್ಕಮಗಳೂರಲ್ಲು ಇದೇ ರೀತಿ ಶಬ್ಧ ಬಂದಿದ್ದು, ಭೂಮಿ ನಡುಗಿದ ಅನುಭವಾಗಿದೆ. ಅಲ್ಲೂ ಜನರ ಮನೆ ಬಿಟ್ಟು ಹೊರಗಡೆ ಓಡಿ ಬಂದಿದ್ದಾರೆ ಎನ್ನಲಾಗಿದೆ.