ಬಾರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ
yadgiri, ಶಹಾಪುರಃ ಮಂಗಳವಾರ ಮಾ.1 ರಂದು ಇಲ್ಲಿನ ಬಸವೇಶ್ವರ ನಗರದಲ್ಲಿರುವ ಬಾರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಮಹಾಶಿವನಿಗೆ ವಿಶೇಷ ಪೂಜೆ ಜರುಗಲಿದೆ. ಮಹಾ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಅಲಂಕಾರಿಕ ಪೂಜೆ ನಡೆಯಲಿದ್ದು, ಸದ್ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಪೀಠದ ವಿಶ್ವರಾಧ್ಯ ದೇವರು ಪ್ರಕಟಣೆಂiÀiಲ್ಲಿ ತಿಳಿಸಿದ್ದಾರೆ.
ಸಂಜೆ ಮಹಾಶಿವನ ದರ್ಶನಕ್ಕೆ ಬರುವ ಭಕ್ತಾಧಿಗಳು ಶುಚಿತ್ವ, ಶಾಂತತೆ ಕಾಪಾಡಬೇಕು. ಸಾಲಾಗಿ ಶ್ರೀದೇವರ ದರ್ಶನ ಪಡೆಯಬೇಕು. ಅಲ್ಲದೆ ಸಿಹಿ, ಅನ್ನ ಪ್ರಸಾದ ಭಕ್ತಾಧಿಗಳಿಂದ ವಿತರಣೆ ನಡೆಯಲಿದೆ. ನಾಗರಿಕರು ಆಗಮಿಸಿ ಮಹಾಶಿವನ ದರ್ಶನ ಪಡೆದು ಪುನೀತರಾಗಬೇಕೆಂದು ಅವರು ಕೋರಿದ್ದಾರೆ.