ಪ್ರಮುಖ ಸುದ್ದಿ

ಬೆಳಗಾವಿ ಲೋಕಸಭೆ ಉಪ ಚುನಾವಣೆ ಕಣಕ್ಕೆ ಶೆಟ್ಟರ್ ಸೊಸೆ ಶ್ರದ್ಧಾ ಸ್ಪರ್ಧೆ.?

ಬೆಳಗಾವಿ ಲೋಕಸಭೆ ಉಪ ಚುನಾವಣೆ ಕಣಕ್ಕೆ ಶೆಟ್ಟರ್ ಸೊಸೆ ಶ್ರದ್ಧಾ.?

ಬೆಳಗಾವಿಃ ಬೆಳಗಾವಿ ಲೋಕಸಭಾ ಸಂಸದರಾಗಿದ್ದ ಸುರೇಶ ಅಂಗಡಿಯವರ ಅಕಾಲಿಕ‌ ನಿಧನದಿಂದ ತೆರವಾದ ಸ್ಥಾನಕ್ಕೆ ಸ್ಪರ್ಧೆಯಲ್ಲಿ ಸುರೇಶ ಅಂಗಡಿ ಅವರ ಕಿರಿಯ ಪುತ್ರಿ ಹಾಗೂ ಜಗಧೀಶ ಶೆಟ್ಟರ ಸೊಸೆಯು ಆದ ಶ್ರದ್ಧಾ ಶೆಟ್ಟರ್ ಕಣಕ್ಕಿಳಿಯುವ ಲಕ್ಷಣಗಳು ಕಂಡು ಬರುತ್ತುವೆ.

ಪೂರಕ ಎಂಬಂತೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್ ವೇದಿಕೆ ಹಂಚಿಕೊಂಡರು. ಅಲ್ಲದೆ ಎಲ್ಲಾ ರೈತ ಮಹಿಳೆಯರೊಂದಿಗೆ ಅಪ್ಪುಗೆಯೊಂದಿಗೆ ಮಾತನಾಡಿ ಯೋಗ ಕ್ಷೇಮ ವಿಚಾರಿಸಿದರು.

ಇದೇ ಮೊದಲ ಬಾರಿಗೆ ಅವರು ಬಹಿರಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೊಂದಿಗೆ ಬೆರೆತಿರುವದು ಕಂಡು ಬಂದಿತು.

ಈ ಮಧ್ಯ ಮಾವ ಜಗಧೀಶ ಶೆಟ್ಟರ್ ಸೊಸೆಯನ್ನು ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿಸಲು ಬಿಜೆಪಿ ಟಿಕೆಟ್ ಗಾಗಿ ರಾಷ್ಟಮಟ್ಟದ ನಾಯಕರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಮತ್ತು ಬೆಳಗಾವಿ ಶಾಸಕರೊಂದಿಗೆ ತೆರೆಮರೆಯಲ್ಲೆ ಮಾತುಕತೆ ನಡೆಸಿದ್ದಾರೆ‌ ಎಂಬುದು ಗೊತ್ತಿರುವ ವಿಷಯ.

ನಮ್ಮ ತಂದೆವರ ನಿಧನ ಹೊಂದಿದರು, ಕ್ಷೇತ್ರದ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳ ನಮ್ಮನ್ನು ಕಾಣಲು ಬರುತ್ತಿದ್ದಾರೆ. ನಾವದನ್ನು ನಿರಂತರ ಸಂಪರ್ಕದಲ್ಲಿದ್ದೇವೆ. ಚುನಾವಣೆಗೆ ನಿಲ್ಲೋದು ಬಿಡೋದು ಮುಂದಿನ ವಿಚಾರ ನಮ್ಮ ತಂದೆಯವರ ಮೇಲೆ ಅಭಿಮಾನವನ್ನು ಹೊಂದಿ ಬಂದವರನ್ನು ನಾವೆಂದಿಗೂ ಕಡೆಗಣಿಸಲ್ಲ. ಅದನ್ನು ಉಳಿಸಿಕೊಳ್ಳುತ್ತೇವೆ.

ಶ್ರದ್ಧಾ ಶೆಟ್ಟರ್ (ಸುರೇಶ ಅಂಗಡಿ ಕಿರಿಯ ಮಗಳು)

Related Articles

Leave a Reply

Your email address will not be published. Required fields are marked *

Back to top button