ಪ್ರಮುಖ ಸುದ್ದಿ
ಸಮಾಜದ ಸಾಮರಸ್ಯ ಹಾಳು ಮಾಡುತ್ತಿರುವ ಬಿಜೆಪಿ – ಸಿದ್ರಾಮಯ್ಯ ಆಕ್ರೋಶ
ಸಮಾಜದ ಸಾಮರಸ್ಯ ಹಾಳು ಮಾಡುತ್ತಿರುವ ಬಿಜೆಪಿ – ಸಿದ್ರಾಮಯ್ಯ ಆಕ್ರೋಶ
ಬೆಂಗಳೂರುಃ ಬಿಜೆಪಿ ಬೆಲೆ ಏರಿಕೆ ವಿಷಯ ಮರೆ ಮಾಚುವದಕ್ಕೆ ಬಿಜೆಪಿ ಕೋಮುವಾದ ಭಾವನೆ ಬಿತ್ತುತ್ತಿದೆ ಎಂದು ಮಾಜಿ ಸಿಎಂ ಸಿದ್ರಾಮಯ್ಯ ಆರೋಪಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್, ಹಲಾಲ್ ಹೀಗೆ ಕೋಮು ಭಾವನೆ ಬಿತ್ತುವ ಮೂಲಕ ಬಿಜೆಪಿ ಸಮಾಜ ಹಾಳು ಮಾಡುತ್ತಿದೆ. ಸಾಮರಸ್ಯ ಹದಗೆಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್, ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಬಗ್ಗೆ ಮಾತಾಡದ ಬಿಜೆಪಿ, ಬೆಲೆ ಏರಿಕೆ ಬಗ್ಗೆ ಕೇಳಿದರೆ, ಅದು ಅಂತರರಾಷ್ಟ್ರೀಯ ಮಟ್ಟದ ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಪ್ರಕಾರ ನಡೆಯುತ್ತದೆ ನಾವೇನು ಮಾಡಲಾಗಲ್ಲ ಎಂಬ ಆಶಯ ವ್ಯಕ್ತಪಡಿಸುವ ಅವರು, ಚುನಾವಣೆ ವೇಳೆ ಬೆಲೆ ಇಳಿಕೆ ಅದ್ಹೇಗೆ ಹಾಗಿತ್ತು ಎಂದು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡಲ್ಲ ಎಂದು ದೂರಿದರು.