ಸ್ನೇಹಜೀವಿ ಟ್ರಸ್ಟ್ ಉದ್ಘಾಟನೆ
ಸಾಮಾಜಿಕ, ಶಿಕ್ಷಣದ ಉನ್ನತಿಗೆ ಟ್ರಸ್ಟ್ ಶ್ರಮಿಸಲಿ- ಗದ್ದುಗೆ
yadgiri, ಶಹಾಪುರಃ ಸಮಾಜದ ಉನ್ನತಿಗೆ ಸೇವಾ ಮನೋಭಾವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ನಿಸ್ವಾರ್ಥತೆಯಿಂದ ಯಾವುದೇ ಒಂದು ಕೆಲಸವನ್ನು ನಿರಂತರವಾಗಿ ಮುಂದುವರೆಸಿದಲ್ಲಿ ಅದಕ್ಕೆ ತಕ್ಕ ಫಲ ಅದರ ಜೊತೆಗೆ ಬಂದಿರುತ್ತದೆ ಎಂಬುದು ಮರೆಯಬೇಡಿ ಎಂದು ಕರವೇ ಉಕ ಅಧ್ಯಕ್ಷ ಡಾ.ಶರಣು ಗದ್ದುಗೆ ಅಭಿಪ್ರಾಯಪಟ್ಟರು.
ನಗರದ ಎಸ್.ಬಿ.ದೇಶಮುಖ ಕಾಲೇಜಿನಲ್ಲಿ ನಡೆದ ಸ್ನೇಹಜೀವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ) ಉದ್ಘಾಟನೆ ಹಾಗೂ ಸಾಂಸ್ಕøತಿಕ ಸಮಾರಂಭ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಂಘ, ಸಂಸ್ಥೆಗಳು ಸಮಾಜದ ಏಳ್ಗೆಗಾಗಿ ದೇಶದ ಪ್ರಗತಿಗಾಗಿ ಸೇವೆ ನೀಡುವದು ಅವುಗಳ ಕರ್ತವ್ಯ. ಆ ನಿಟ್ಟಿನಲ್ಲಿ ನಾಲ್ಕಾರು ಜನ ಅಥವಾ ಒಂದು ಸಮೂಹ ಸೇರಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವದು ರೂಢಿ. ಆದರೆ ಸಮಾಜ, ಸಂಘಟನೆ ಅಂದ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು ಅವೆಲ್ಲವನ್ನು ಮೆಟ್ಟಿ ನಿಲ್ಲುವ ಮೂಲಕ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋದಲ್ಲಿ ಮುಂದೆ ಟ್ರಸ್ಟ್ ಸಾಮಾಜಿಕವಾಗಿ ವಿಸ್ತಾರಗೊಳ್ಳುವದರಲ್ಲಿ ಎರಡು ಮಾತಿಲ್ಲ. ಆದರೆ ಒಗ್ಗಟ್ಟಿನಿ ಜೊತೆಗೆ ನಿರಂತರ ಶ್ರಮವಿರಲಿ ಎಂದು ಸಲಹೆ ನೀಡಿದರು.
ದೇಶಮುಖ ಕಾಲೇಜಿನ ಮುಖ್ಯಸ್ಥ ಶಿವರಾಜ ದೇಶಮುಖ ಮಾತನಾಡಿ, ಸ್ನೇಹಜೀವಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹೆಸರಿನಲ್ಲಿ ಉತ್ತಮ ಬಾಂಧ್ಯವ್ಯ ಹೊಂದುವಂತಿದೆ. ಟ್ರಸ್ಟ್ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಸಾಕಷ್ಟು ಕನಸುಗಳನ್ನು ಹೊಂದಿದ್ದು, ಟ್ರಸ್ಟ್ ಮೂಲಕ ಅದನ್ನು ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ದೇಶದ ಸಂಸ್ಕøತಿಕ, ಜಾನಪದ ಉಳಿವಿಗೆ ಶ್ರಮಿಸಿದ್ದಾರೆ. ಅವರ ಸೇವೆ ಈ ನಾಡಿಗೆ ಅಗತ್ಯವಿದೆ.
ಸಾಕಷ್ಟು ಪ್ರತಿಭೆಗಳನ್ನು ಹೊರ ತೆಗೆದು ನಾಡಿಗೆ ಪರಿಚಯಿಸುವ ಕಾರ್ಯ ಅವರಿಂದ ಆಗಿದೆ. ಆ ನಿಟ್ಟಿನಲ್ಲಿ ಹೊಸ ಟ್ರಸ್ಟ್ ಮೂಲಕವು ಶೈಕ್ಷಣಿಕ ಪ್ರಗತಿ ಮತ್ತು ಸಮಾಜದ ಉನ್ನತಿಗಾಗಿ ಅವರ ಸಏವೆ ಮುಂದುವರೆಯಲಿ ಸರ್ವರೂ ತನುಮನ ಧನದಿಂದ ಅವರಿಗೆ ಸಹಕರಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷರೆವಹಿಸಿದ್ದ ಶಿಕ್ಷಕಿ ಅನಸೂಯ ಚಲವಾದಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ, ಶರಣು ಪಾಟೀಲ್, ಡಾ,ಮಹಾದೇವಯ್ಯ ಹಿರೇಮಠ, ಟ್ರಸ್ಟ್ ನ ಅಧ್ಯಕ್ಷೆ ಸಂಗೀತಾ ಹೂಗಾರ, ಕಾರ್ಯದರ್ಶಿ ಸುರೇಖಾ ಕುಂಬಾರ ಉಪಸ್ಥಿತರಿದ್ದರು. ನಂತರ ಸೃಷ್ಟಿ ಹೂಗಾರ ಅವರಿಂದ ಭರತ ನಾಟ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.