ಪ್ರಮುಖ ಸುದ್ದಿ
ಶಿರಸಿಯಲ್ಲಿ ನಿಜ ನಾಗರಕ್ಕೆ ಪೂಜೆ ಸಲ್ಲಿಸಿದ ಹುಲೆಕಲ್ ಕುಟುಂಬ
ಶಿರಸಿಯಲ್ಲಿ ನಿಜ ನಾಗರಕ್ಕೆ ಪೂಜೆ ಸಲ್ಲಿಸಿದ ಹುಲೆಕಲ್ ಕುಟುಂಬ
ಶಿರಸಿಃ ಕಲ್ಲ ನಾಗರ ಕಂಡರೆ ಪೂಜೆ ಮಾಡುವರು ನಿಜ ನಾಗರ ಕಂಡರೆ ಕಲ್ಲನೆಸೆಯುವರು ಎಂಬ ಊಕ್ತಿಗೆ ವಿರೋಧವೆಂಬಂತೆ ಇಲ್ಲಿನ ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರ ಕುಟುಂಬ ನಾಗರ ಪಂಚಮಿ ಅಂಗವಾಗಿ ಕಾಡಿಗೆ ತೆರಳಿ ನಿಜ ನಾಗರನ ಹುಡುಕಿ ಪೂಜೆ ಸಲ್ಲಿಸುವ ಪರಿಪಾಠವನ್ನು ಕಳೆದ ನಾಲ್ಕು ವರ್ಷದಿಂದ ರೂಢಿಸಿಕೊಂಡಿದ್ದಾರೆ.
ಅದರಂತೆ ಇಂದು ಶುಕ್ರವಾರ ಕಾಡಿಗೆ ತೆರಳಿ ನಾಗರಾಜನನ್ನ ಹುಡುಕಿ ವಿಶೇಷ ಪೂಜೆ ಸಲ್ಲಿಸಿರುವದು ಎಲ್ಲಡೆ ವೈರಲ್ ಆಗಿದೆ.
ಕಳೆದ ಮೂರು ದಶಕಗಳಿಂದ ಅವರ ತಂದೆ ಅವರು ನಾಡಿಗೆ ಬಂದ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದರಂತೆ, ಪ್ರಸ್ತುತ ಅವರ ತಂದೆ ಅಗಲಿಕೆಯ ನಂತರ ಮಗನು ಉರಗ ತಜ್ಞರಾಗಿ ಆ ಕೆಲಸ ಮುಂದುವರೆಸಿದ್ದಾರೆ.
ತಂದೆ ಅಗಲಿಕೆ ತರವು ಪ್ರಶಾಂತ ಹುಲೇಕಲ್ ಕುಟುಂಬ ಪ್ರತಿ ನಾಗರ ಪಂಚಮಿ ಹಬ್ಬದಂದು ಕಾಡಿಗೆ ತೆರಳಿ ನಾಗರಾಜನಿಗೆ ಪೂಜೆ ಸಲ್ಲಿಸುತ್ತಿದೆ. ಇದೊಂದು ವಿಶೇಷ ಪರಿಪಾಠವಾಗಿದ್ದು, ಜನ ನಿಬ್ಬೆರಗಾಗಿದ್ದಾರೆ ಎನ್ನಬಹುದು.