Home

ಸುರಪುರದಲ್ಲಿ ಮಡಿವಾಳೇಶ್ವರ ಜಯಂತ್ಯುತ್ಸವ

ಡಾ.ಅನ್ನಪೂರ್ಣ ಆಯೋಗ ವರದಿ ಜಾರಿಗೆ ಆಗ್ರಹ

yadgiri, ಸುರಪುರಃ ವೀರಗಣಾಚಾರಿ ವಚನ ಸಂರಕ್ಷಕ ಶ್ರೀಮಡಿವಾಳೇಶ್ವರ ಜಯಂತ್ಯುತ್ಸವ ಅಂಗವಾಗಿ ನಗರದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೋವಿಡ್ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಡಿವಾಳ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರು ಗೋಗಿ, ಮಡಿವಾಳ ಸಮುದಾಯ ತೀರಾ ಹಿಂದುಳಿದ ಸಮಾಜವಾಗಿದ್ದು, ಆರ್ಥಿಕವಾಗಿ, ಸಾಮಾಜಿಕ, ರಾಜಕೀಯವಾಗಿ ಮುನ್ನೆಲೆಗೆ ಬರಲು ಸರ್ಕಾರ ಡಾ.ಅನ್ನಪೂರ್ಣ ಆಯೋಗ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಶರಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆಗೆ ಆದೇಶ ಹೊರಡಿಸಿರುವದು ಸಂತಸ ತಂದಿದೆ. ಆದರೆ ಸಣ್ಣ ಸಮುದಾಯ ಯಾವುದೇ ಧ್ವನಿ ಇಲ್ಲವೆಂಬ ಕಾರಣಕ್ಕೆ ಹಲವಡೆ ಜಯಂತಿ ಆಚರಣೆ ಮಾಡದೆ ಅಪಮಾನ ಮಾಡಿದ ದೂರುಗಳು ಕಳೆದ ಬಾರಿ ಬಂದಿದ್ದವು. ಹೀಗಾಗಿ ಈ ಸಲ ಯಾವ ಇಲಾಖೆ, ಶಾಲೆಗಳಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಮಾಡಿರುವದಿಲ್ಲವೋ ಅಂತವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಚಂದನಕೇರಿ, ಮಡಿವಾಳಪ್ಪ ಮಂಗಿಹಾಳ, ರಾಜೂ ಮಡಿವಾಳ, ಸಾಯಿಬಣ್ಣ ಅಗಸರ, ಕರಿಯಪ್ಪ ತಳವಾರಗೇರಿ, ದೇವಿಂದ್ರಪ್ಪ ಮುಷ್ಟಳ್ಳಿ ಇತರರಿದ್ದರು. ಇದೇ ಸಂದರ್ಭದಲ್ಲಿ ಚಂದ್ರು ಗೋಗಿ ಕುಟುಂಬದಿಂದ ಅನ್ನಸಂತರ್ಪಣೆ ಕಾರ್ಯ ಜರುಗಿತು.

Related Articles

Leave a Reply

Your email address will not be published. Required fields are marked *

Back to top button