ರಾತ್ರಿ 9 ಆದ್ರೆ ಸಾಕು ಸುರಪುರ ಸ್ಥಬ್ಧ, ಪಿಐ ಮೂಲಿಮನಿ ಕಾರ್ಯಕ್ಕೆ ಮೆಚ್ಚುಗೆ
ರಾತ್ರಿ 9 ಗಂಟೆಯಿಂದ ಸುರಪುರ ಸ್ಥಬ್ಧ, ಪಿಐ ಮೂಲಿಮನಿ ಕಾರ್ಯಕ್ಕೆ ಮೆಚ್ಚುಗೆ
ಯಾದಗಿರಿಃ ಜಿಲ್ಲೆಯ ಸುರಪುರ ದಲ್ಲಿ ರಾತ್ರಿ 9 ಗಂಟೆಯಾದರೆ ಸಾಕು ಯಾರೊಬ್ಬರು ಹೊರಬರದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ನೂತನ ನಗರ ಠಾಣೆ ಪಿಐ ಸುನೀಲ್ ಮೂಲಿಮನಿ ಮುಂದಾಗಿದ್ದಾರೆ.
ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಕಾರಣ ಪಿಐ ಮೂಲಿಮನಿ ಸುರಪುರ ನಗರದಲ್ಲಿ ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.
ಮುಂಚಿತವಾಗಿ ಅವರು, ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ವ್ಯಾಪಾರಸ್ಥರಿಗೆ ಸೂಚನೆ ನೀಡುವ ಕೆಲಸ ಮಾಡಿದರು. ಜಿಲ್ಲಾಧಿಕಾರಿಗಳ ಆದೇಶದಂತೆ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧಾಜ್ಞೆ ಜಾರಿಯಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಸುಖಾಸುಮ್ಮನೆ ಹೊರಗಡೆ ಬರುವಂತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಉದಾಹರಣೆಗೆ ಆರೋಗ್ಯ ಸಮಸ್ಯೆ ಸೇರಿದಂತೆ ತುರ್ತು ಪರಿಸ್ಥಿತಿ ವೇಳೆ ಮಾತ್ರ ಬರಬಹುದು.
ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಂಡು ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು, ಮೊದಲು ವ್ಯಾಪಾರಿಗಳು, ಬೀದಿ ಬದಿ, ಬಡಾವಣೆಯಲ್ಲಿ ವ್ಯವಹಾರ ಮಾಡುವ ಹಲವಾರು ಸಣ್ಣ ಪುಟ್ಟ ಅಂಗಡಿ, ಹೊಟೇಲ್ ಗಳ ಮಾಲೀಕರು ಸೇರಿದಂತೆ ತಳ್ಳುವ ಬಂಡಿ, ತರಕಾರಿ ಮಾರಾಟಗಾರರಿಗೆ ಮೂಲಿಮನಿಯವರು ಖಡಕ್ ವಾರ್ನಿಂಗ್ ನೀಡಿದ್ದರು.
ಅನಗತ್ಯ ಹೊರಗಡೆ ಬಂದರೆ ಕಠಿಣ ಕ್ರಮ ಜರುಗಿಸುವದು ಅನಿವಾರ್ಯವೆಂದು ಎಚ್ಚರಿಕೆ ನೀಡಿದ್ದು, ಮಂಗಳವಾರದಿಂದ ಇಡಿ ಸುರಪುರ ರಾತ್ರಿ 9 ಆದರೆ ಸಾಕು ಸ್ತಬ್ಧ ತೆಗೆ ಜಾರುತ್ತಿದೆ. ಪಿಐ ಮೂಲಿಮನಿ ಕಾರ್ಯಕ್ಕೆ ಇದೀಗ ಮೆಚ್ಷುಗೆ ವ್ಯಕ್ತವಾಗುತ್ತಿದೆ.
ಕೊರೊನಾ ರೂಪಾಂತರಿ ಹಿನ್ನೆಲೆ ಸಾಕಷ್ಟು ಆತಂಕವಿದೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಸೊನ್ನೆ ಇದೆ ಎಂದು ಮೈ ಮರೆಯಬಾರದು. ಕೊರೊನಾ ನಿಯಮ ಕಟ್ಟು ನಿಟ್ಟಾಗಿ ಪಾಲಿಸುವ ಅನಿವಾರ್ಯತೆ ಇದೆ. ಆ ಹಿನ್ನೆಲೆ ಇಲ್ಲಿನ ಸಿಪಿಐ ಸುನೀಲ್ ಮೂಲಿಮನಿಯವರ ಕಾರ್ಯಕ್ಷಮತೆ ಮೆಚ್ಚುವಂತಹದ್ದು, ಅವರ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಕೊರೊನಾ ತಡೆಗೆ ಜನರ ಸಹಾಯ ಸಹಕಾರ ಅತ್ಯಗತ್ಯವಿದೆ. ಜನರ ರಕ್ಷಣೆಗಾಗಿಯೇ ಪೊಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂಬ ಅರಿವು ಜನರಲ್ಲಿ ಬರಬೇಕಿದೆ.
– ಭೀಮಾಶಂಕರ ಬಿಲ್ಲವ್. ಬಿಜೆಪಿ ಮುಖಂಡರು. ಸುರಪುರ.