ಪ್ರಮುಖ ಸುದ್ದಿ
ಸಿಎಬಿ ಭಾರತದ ಮುಸ್ಲಿಂರಿಗೆ ತೊಂದರೆ ಇಲ್ಲ- ಅಹ್ಮದ್ ಬುಕಾರಿ
ಸಿಎಬಿ ಭಾರತದ ಮುಸ್ಲಿಂರಿಗೆ ತೊಂದರೆ ಇಲ್ಲ- ಅಹ್ಮದ್ ಬುಕಾರಿ
ನವದೆಹಲಿಃ ಪೌರತ್ವ ತಿದ್ದುಪಡಿ ಮಸೂದೆ – 2019 ಅನುಷ್ಠಾನದಿಂದ ಪಾಕಿಸ್ತಾನ, ಬಾಂಗ್ಲಾ ಮತ್ತು ಇಸ್ಲಾಂಬಾದ್ ನಿಂದ ಬಂದ ನಿರಾಶ್ರಿತ ಮುಸ್ಲಿಂರಿಗೆ ತೊಂದರೆಯಾಗಲಿದೆ ಹೊರತು ಭಾರತೀಯ ಮುಸ್ಲಿಂರಿಗೆ ಅಲ್ಲ ಎಂದು ನಗರದ ಜಾಮಿಯ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹ್ಮದ್ ಬುಕಾರಿ ಹೇಳಿದರು.
ಭಾರತದಾದ್ಯಂತ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವಡೆ ಹಿಂಸಾತ್ಮಕ ರೂಪಪಡೆದಿವೆ.
ಪ್ರತಿಭಟನೆ ಎನ್ನುವದು ಭಾರತೀಯರ ಹಕ್ಕು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದಾಗ್ಯು ಪ್ರತಿಭಟನಾಕಾರರು ಅದರ ಮಿತಿಯನ್ನು ಅರಿತಿರಬೇಕು.
ನಮ್ಮ ಭಾವನೆಗಳನ್ನು ನಿಯಂತ್ರದಲ್ಲಿಟ್ಟುಕೊಳ್ಳುವದು ತುಂಬಾ ಮುಖ್ಯ ವಿದೆ ಎಂದರು. ಮಂಗಳವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ಘಟನೆಗೆ ತಿರುಗಿರುವದನ್ನು ಸ್ಮರಿಸಬಹುದು.