ಪ್ರಮುಖ ಸುದ್ದಿ

ಷಟ್ಪಥ ರಸ್ತೆ ಯೋಜನೆಃ ಭೂ ಸ್ವಾಧೀನ ರೈತರಿಗೆ ಅನ್ಯಾಯ – ಗುರು ಪಾಟೀಲ್

ಹಳೇ ದರದಲ್ಲಿ ಭೂಸ್ವಾಧೀನ ರೈತರಿಗೆ ಅನ್ಯಾಯ - ಶಿರವಾಳ

ಷಟ್ಪಥ ರಸ್ತೆ ಯೋಜನೆಃ ಭೂ ಸ್ವಾಧೀನ ರೈತರಿಗೆ ಅನ್ಯಾಯ – ಗುರು ಪಾಟೀಲ್

ಹಳೇ ದರದಲ್ಲಿ ಭೂಸ್ವಾಧೀನ ರೈತರಿಗೆ ಅನ್ಯಾಯ – ಶಿರವಾಳ

yadgiri, ಶಹಾಪುರಃ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಾಲೂಕಿನ ಅಣಬಿ, ಶಿರವಾಳ ಸೀಮಾಂತರ ಭೂಮಾರ್ಗದ ಮೂಲಕ ಷಟ್ಪಥ ಹೆದ್ದಾರಿ (ಗ್ರೀನ್ ಕಾರಿಡಾರ್) ಹಾದು ಹೋಗುತ್ತಿದ್ದು, ಇದು ಅಕ್ಕಲಕೋಟದಿಂದ (ಮಹಾರಾಷ್ಟ್ರ) ಕಲ್ಬುರ್ಗಿಯ ಕೆಲ ಹಳ್ಳಿಗಳ ಮೂಲಕ ಯಾದಗಿರಿ ಒಳಗೊಂಡು ರಾಯಚೂರ ಜಿಲ್ಲೆ ಮೂಲಕ ಆಂದ್ರಪ್ರದೇಶ ಹೆದ್ದಾರಿ ತಲುಪಲಿದೆ ಇದೊಂದು ಉತ್ತಮ ಯೋಜನೆ ಸರಿ, ಆದರೆ ನಮ್ಮ ಭಾಗದಲ್ಲಿರುವ ಭೂಮಿಗಳ ಸ್ವಾಧೀನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಯಾವ ಮಾನದಂಡದ ಪ್ರಕಾರ ರೈತರಿಗೆ ಹಣ ನೀಡುತ್ತಿದ್ದೀರಿ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದ್ದಾರೆ.

ಈ ಭಾಗದ ಶಿರವಾಳ, ಅಣಬಿ ಭೂಮಿಗಳಿಗೆ ಐದು ವರ್ಷದ ಹಿಂದಿನ ಮಾ‌ರ್ಗಸೂಚಿ ‌ದರ ಆಧಾರದ ಮೇಲೆ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಾಲ್ಕು ಪಟ್ಟು ಹೆಚ್ಚಿನ ದರ ನೀಡಲಾಗುತ್ತಿದೆ. ಹಳೇ ಐದು ವರ್ಷದ ಹಿಂದೆ ಇದ್ದ ಜಮೀನಿನ ಬೆಲೆ ಆಧರಿಸಿದರೆ, ಈ ಭಾಗದ ರೈತರಿಗೆ ತುಂಬಾ ಅನ್ಯಾಯವಾಗಲಿದೆ. ಈ ಭಾಗದ ಭೂಮಿ ತುಂಬಾ ಗುಣಮಟ್ಟದ್ದಾಗಿದೆ. ಅದರಲ್ಲೂ ಕೆಲವರದ್ದು ನೀರಾವರಿ, ಉತ್ತಮ ಭೂಮಿ ಇದ್ದರೂ ಕುಷ್ಕಿ ಎಂದು ಬರೆಯಲಾಗಿದೆ. ನೀರಾವರಿ ಭೂಮಿಗಳನ್ನು ಸಮರ್ಪಕವಾಗಿ ಪರಿಗಣಿಸಿರುವದಿಲ್ಲ. ಮತ್ತು ಕೆಲ ಜಮೀನುಗಳಲ್ಲಿ ಪ್ಲಾಂಟೇಷನ್ ಮಾಡಲಾಗಿದೆ, ತೋಟಗಾರಿಕೆ ಇತರೆ ಹಣ್ಣಿನ ಗಿಡಗಳನ್ನು ಬೆಳೆಯಲಾಗಿದೆ. ಅಂತಹ ಭೂಮಿಗಳನ್ನು ಪರಿಶೀಲಿಸಿ ಹೆಚ್ಚಿನ ದರ ನೀಡಬೇಕಿದೆ.

ಮುಖ್ಯವಾಗಿ ಹೆದ್ದಾರಿ ಪ್ರಾಧಿಕಾರದ ಹಳೇ ಮಾರ್ಗಸೂಚಿ ದರ ಆಧರಿಸಿ ರೈತರ ಜಮೀನು ಪಡೆಯುವದು ಅನ್ಯಾಯವಾಗಲಿದೆ. ನೂತನ ಮಾರ್ಗಸೂಚಿ ಅನ್ವಯ ಭೂದರ ಆಧರಿಸಿ ಅದರ ನಾಲ್ಕು ಪಟ್ಟು ಹಣ ನೀಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಗ್ಧ ರೈತರಿಗೆ ತುಂಬಾ ಅನ್ಯಾಯವಾಗಲಿದೆ. ಈ ಕುರಿತು ಸಂಬಂಧಿಸಿದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರೈತರಿಗಾಗುತ್ತಿರುವ ಅನ್ಯಾಯ ಕುರಿತು ಮನವರಿಕೆ ಮಾಡಿದ್ದೇನೆ. ಆದಾಗ್ಯು ಅಧಿಕಾರಿಗಳು ಅದೇ ವರ್ತನೆ ಮುಂದುವರೆಸಿದ್ದು ರೈತರಿಗೆ ಅನ್ಯಾಯವಾಗಲು ಬಿಡುವದಿಲ್ಲ. ಬೀದಿಗಿಳಿದು ಹೋರಾಟ ಮಾಡುವದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಈ ಕೂಡಲೇ ಅಧಿಕಾರಿಗಳು ಈ ಭಾಗದ ಭೂಮಿಗಳನ್ನು ಸಮಗ್ರವಾಗಿ ಪರಿಶೀಲಿಸಿ ನೂತನ ಬೆಲೆ ಆಧರಿಸಿ ರೈತರಿಗೆ ಹಣ ನೀಡಬೇಕು. ಈ ಭಾಗದ ರೈತರ ಸಭೆ ಕರೆಯದೆ, ಈ ಕುರಿತು ಮಾಹಿತಿಯೂ ನೀಡದೆ ಏಕಾಕಿ ಭೂಸ್ವಾಧೀನಕ್ಕೆ ಮುಂದಾಗಿರುವ ಅಧಿಕಾರಿಗಳ ದುರ್ವರ್ತನೆ ಎದ್ದು ಕಾಣುತ್ತಿದೆ.

ಕೂಡಲೇ ಈ ಭಾಗದ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ ಅವರ ಮನವಿಗೆ ಸ್ಪಂಧಿಸಿ ನಂತರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button