ಪ್ರಮುಖ ಸುದ್ದಿ
ಆಶ್ರಯ ಕಮಿಟಿ ಅಧ್ಯಕ್ಷರಾಗಿ ಯುವ ನಾಯಕ ಸುರಪುರಕರ್ ನೇಮಕ
ಆಶ್ರಯ ಸಮಿತಿ ಅಧ್ಯಕ್ಷರಾಗಿ ವಸಂತ ಸುರಪುರಕರ್ ನೇಮಕ
yadgiri, ಶಹಾಪುರ: ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ವಸಂತಕುಮಾರ ತಂದೆ ಮಲ್ಲಪ್ಪ ಸುರಪುರಕರ್ ಅವರನ್ನು ನೇಮಿಸಿ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-2 ಜಿ.ಲಕ್ಷ್ಮಣ ಆದೇಶ ನೀಡಿದ್ದಾರೆ.
ಶಾಸಕ ಶರಣಬಸಪ್ಪ ದರ್ಶನಾಪುರ ಅವರು ವಸಂತಕುಮಾರ ಬಿನ್ ಮಲ್ಲಪ್ಪ ಅವರನ್ನು ಶಹಾಪುರ ನಗರ ಆಶ್ರಯ ಸಮಿತಿಗೆ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡುವಂತೆ ಕೋರಿದ್ದರಿಂದ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಹರ್ಷಃ ಯುವ ನಾಯಕ ವಸಂತಕುಮಾರ ಸುರಪುರಕರ್ ಅವರನ್ನು ನಗರ ಆಶ್ರಯ ಕಮಿಟಿ ಅಧ್ಯಕ್ಷರನ್ನಾಗಿ ನೇಮಿಸಿರುವದು ಸೂಕ್ತ ಆಯ್ಕೆಯಾಗಿದೆ ಎಂದು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.