ಪ್ರಮುಖ ಸುದ್ದಿ
ಮಹಾರಾಷ್ಟ್ರದ ಸಿಎಂ ಆಗಿ ಉದ್ಧವ ಠಾಕ್ರೆ, ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ..!?
ಉದ್ಧವ ಠಾಕ್ರೆ CM – ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ..!?
ಮುಂಬೈಃ ಮಹಾರಾಷ್ಟ್ರ ದ ರಾಜಕೀಯ ತಾಲೀಮು ಕೊನೆಯ ಹಂತ ತಲುಪಿರುವ ಸಾಧ್ಯತೆ ಕಂಡು ಬಂದಿದೆ.
ಎನ್ ಸಿಪಿ ವಿಧಿಸಿದ್ದ ಶರತ್ತಿಗೆ ಶಿವಸೇನೆ ಒಪ್ಪಿಮೊಂಡಿರುವ ಹಿನ್ನೆಲೆಯಲ್ಲಿ ಶಿವಸೇನೆ ಸಂಸದ ಕೇಂದ್ರಗೃಹ ಸಚಿವ ಸಾವಂತ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಎನ್ ಡಿಎ ಮೈತ್ರಿಯಿಂದ ಹೊರಬೇಕೆಂಬ ಎನ್ ಸಿಪಿ ಶರತ್ತಿಗೆ ಶಿವಸೇನೆ ಹೊರಬರಲು ಒಪ್ಪಿಗೆ ನೀಡಿದ್ದು ಬಹುತೇಕ ಕಾಂಗ್ರೆಸ್ ಬಾಹ್ಯ ಬೆಂಬಲ ಪಡೆದು ನಾಳೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಕುರಿತು ಹಕ್ಕುಮಂಡನೆ ಮಾಡುವ ಸಾಧ್ಯತೆ ಇದೆ.
ಮಹಾರಾಷ್ಟ್ರ ದ ನೂತನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲು ತಯಾರಿಯಲ್ಲಿದ್ದರೆ, ಎನ್ ಸಿಪಿ ನಾಯಕ ಶರದ್ ಪವಾರ್ ಸೋದರಳಿಯ ಅಜಿತ್ ಪವಾರ್ ಡಿಸಿಎಂ ಆಗುವದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.