
ದಿನಕ್ಕೊಂದು ಕಥೆ
ಹಕ್ಕಿ ನೀಡಿದ ಮೂರು ಸಲಹೆ
ಬೇಟೆಗಾರನೊಬ್ಬ ಹಕ್ಕಿಯೊಂದನ್ನು ಹಿಡಿದ. ಹಕ್ಕಿ ಹೇಳಿತು, ನನ್ನನ್ನು ಬಿಟ್ಟರೆ ನಿನಗೆ ಮೂರು ಉತ್ತಮ ಸಲಹೆ ನಿಡುತ್ತೇನೆ, ಒಂದು ನೀನು ನನ್ನ ಬಿಟ್ಟಾಗ, ಎರಡನೆಯದು ನಾನು ಕೊಂಬೆಯ ಮೇಲೆ ಕುಳಿತಾಗ, ಮೂರನೆಯದು ನಾನು ಎತ್ತರಕ್ಕೆ ಹಾರಲು ತೊಡಗಿದಾಗ, ಸರಿ ಎಂದ ಬೇಟೆಗಾರ ಹಕ್ಕಿಯನ್ನು ಬಿಟ್ಟ.
ಒಂದನೆಯದಾಗಿ ಮಾಡಿದ ತಪ್ಪುಗಳನ್ನು ನೆನೆನೆನೆದು ನಿನ್ನನ್ನೇ ಶಿಕ್ಷಿಸಿಕೊಳ್ಳಬೇಡ, ಕೊಂಬೆಯ ಮೇಲೆ ಕುಳಿತ ಹಕ್ಕಿ ಹೇಳಿತು.
ಎರಡನೆಯದಾಗಿ ಕಾಮನ್‌ಸೆನ್ಸ್‌ಗೆ ವಿರುದ್ಧವಾದುದನ್ನು ನಂಬಲು ಹೋಗಬೇಡ.
ಇನ್ನೂ ಮೂರನೆಯದಾಗಿ ಎತ್ತರಕ್ಕೆ ಹಾರಿದ ಹಕ್ಕಿ ಹೇಳಿತು. ಮೂರ್ಖ, ನನ್ನ ಹೊಟ್ಟೆಯಲ್ಲಿ ಎರಡು ವಜ್ರಗಳಿದ್ದವು. ಹಕ್ಕಿ ತನ್ನ ಮೂರನೆಯ ಸಲಹೆ ನೀಡಿತು.
ಇದನ್ನು ಕೇಳಿದ ಬೇಟೆಗಾರನಿಗೆ ದುಃಖವಾಯಿತು. ಅಯ್ಯೋ ತಪ್ಪಿತೇ ಎಂದು ಪೇಚಾಡತೊಡಗಿದ. ಮೊದಲು ಕೊಟ್ಟ ಸಲಹೆಗಳನ್ನು ಅಳವಡಿಸಿಕೊಳ್ಳುವುದನ್ನು ಕಲಿತುಕೊ. ಹಾಗೆ ಕಲಿತರೆ ಮೊದಲೆರಡನ್ನು ಕೇಳಿದ ಮೇಲೂ ನೀನು ಹೀಗೆ ಪೇಚಾಡುತ್ತಿರಲಿಲ್ಲ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.