ಚುನಾವಣೆ ಫಲಿತಾಂಶಃ 10 ಕ್ಷೇತ್ರಗಳಲ್ಲಿ TMC, 6 ಕ್ಷೇತ್ರ ಬಿಜೆಪಿ, 1 ಕ್ಷೇತ್ರ ಸಿಪಿಐಎಂ ಮುನ್ನಡೆ
ಚುನಾವಣೆ ಫಲಿತಾಂಶಃ 10 ಕ್ಷೇತ್ರಗಳಲ್ಲಿ TMC, 6 ಕ್ಷೇತ್ರ ಬಿಜೆಪಿ, 1 ಕ್ಷೇತ್ರ ಸಿಪಿಐಎಂ ಮುನ್ನಡೆ
ವಿವಿ ಡೆಸ್ಕ್ಃ ರಾಜ್ಯ ಮೂರು ವಿಧಾನ ಸಭೆ ಕ್ಷೇತ್ರ ಒಂದು ಲೋಕಸಭೆ ಕ್ಷೇತ್ರ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದೆ.
ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು, ಪಶ್ಚಿಮಬಂಗಾಲದಲ್ಲಿ ದೀದಿ ಮತ್ತು ಮೋದಿ ನಡುವೆ ಜಿದ್ದಾಜಿದ್ದಿನ ಚುನಾವಣೆ ನಡೆದಿತ್ತು.
ಮತ ಎಣಿಕೆ ಆರಂಭದಲ್ಲಿಯೇ 10 ಕ್ಷೇತ್ರಗಳಿ ಟಿಎಂಸಿ ದೀದಿ ಮುನ್ನಡೆ ಸಾಧಿಸಿದ್ದರೆ, 6 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 1 ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಕರ್ನಾಟಕದ ಬಸವಕಲ್ಯಾಣ ಉಪಚುನಾವಣೆ ಯಲ್ಲಿ ಮೊದಲಿಗೆ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ, ಆದರೆ ಮಸ್ಕಿಯಲ್ಲಿ ಕಾಂಗ್ರೆಸ್ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಕುರಿತು ಮೊದಲ ಎಣಿಕೆ ವರದಿ ದೊರೆತಿದೆ.
ಮತ ಎಣಿಕಾ ಕೇಂದ್ರದಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಅಭ್ಯರ್ಥಿ ಜೊತೆ ಇಬ್ಬರಿಗೆ ಮಾತ್ರ ಮತ ಎಣಿಕಾ ಕೇಂದ್ರದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಅದು ಕೊರೊನಾ ಟೆಸ್ಟಗ್ ನೆಗೆಟಿವ್ ರಿಪೋರ್ಟ್ ದೊಂದಿಗೆ ಬರಬೇಕೆಂದು ಕಡ್ಡಾಯಗೊಳಿಸಲಾಗಿದೆ.