ಪ್ರಮುಖ ಸುದ್ದಿ

ಯಾದಗಿರಿ: ಮತ್ತೆ 43 ಜನರಿಗೆ ಕೊರೊನಾ ಸೋಂಕು ದೃಢ, ಸೋಂಕಿತರ ಸಂಖ್ಯೆ 1756ಕ್ಕೆ ಏರಿಕೆ

ಯಾದಗಿರಿ: ಜಿಲ್ಲೆಯಲ್ಲಿ ಜುಲೈ 22ರಂದು ಬುಧವಾರ ಮತ್ತೆ 4 ವರ್ಷದ ಹೆಣ್ಣುಮಗು ಸೇರಿದಂತೆ ಒಟ್ಟು 43 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 1,756 ಪ್ರಕರಣಗಳ ಪೈಕಿ 1,512 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಶಂಕರಗೌಡ ಎಸ್.ಸೋಮನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾದಗಿರಿ ತಾಲ್ಲೂಕಿನ ಅನಮಪಲ್ಲಿ ಗ್ರಾಮದ 52 ವರ್ಷದ ಪುರುಷ (ಪಿ-75424), ಯಾದಗಿರಿ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ 4 ವರ್ಷದ ಹೆಣ್ಣುಮಗು (ಪಿ-75444), ಯಾದಗಿರಿ ತಾಲ್ಲೂಕಿನ ಗುಂಜನೂರ ಗ್ರಾಮದ 55 ವರ್ಷದ ಮಹಿಳೆ (ಪಿ-75493), ವಡಗೇರಾ ಸಿಎಚ್‍ಸಿ ಯ 24 ವರ್ಷದ ಮಹಿಳೆ (ಪಿ-75679), ಚಟ್ನಳ್ಳಿ ಗ್ರಾಮದ 24 ವರ್ಷದ ಮಹಿಳೆ (ಪಿ-75725), ಚಟ್ನಳ್ಳಿ ಗ್ರಾಮದ 23 ವರ್ಷದ ಪುರುಷ (ಪಿ-75735), ಅನಮಪಲ್ಲಿ ಗ್ರಾಮದ 68 ವರ್ಷದ ಮಹಿಳೆ (ಪಿ-75738), ಗುರುಮಠಕಲ್‍ನ 46 ವರ್ಷದ ಪುರುಷ (ಪಿ-76075), ಯಾದಗಿರಿ ನಗರದ 35 ವರ್ಷದ ಪುರುಷ (ಪಿ-76118), ಸುರಪುರ ತಾಲ್ಲೂಕಿನ ಕಲ್ಲದೇವನಹಳ್ಳಿ ಪಿಎಚ್‍ಸಿ ಯ 33 ವರ್ಷದ ಪುರುಷ (ಪಿ-76123).

ಯಾದಗಿರಿ ಪೊಲೀಸ್ ಕ್ವಾಟ್ರಸ್‍ನ 32 ವರ್ಷದ ಪುರುಷ (ಪಿ-76128), ಗುರುಮಠಕಲ್ ಪಶುಪಾಲನಾ ಇಲಾಖೆಯ 36 ವರ್ಷದ ಪುರುಷ (ಪಿ-76141), ಗುರುಮಠಕಲ್ ಬಸ್ ಡಿಪೋದ 33 ವರ್ಷದ ಪುರುಷ (ಪಿ-76150), ಯಾದಗಿರಿ ತಾಲ್ಲೂಕಿನ ಅರಕೇರಾ ಗ್ರಾಮದ 35 ವರ್ಷದ ಮಹಿಳೆ (ಪಿ-76172), ಯಾದಗಿರಿ ತಾಲ್ಲೂಕಿನ ಚಿಗಾನೂರ ಗ್ರಾಮದ 30 ವರ್ಷದ ಪುರುಷ (ಪಿ-76184), ಗುರುಮಠಕಲ್ ಬಸ್ ಡಿಪೋದ 42 ವರ್ಷದ ಪುರುಷ (ಪಿ-76205), ಯಾದಗಿರಿ ನಗರದ 20 ವರ್ಷದ ಪುರುಷ (ಪಿ-76233), ಗುರುಮಠಕಲ್ ಕಂದೂರ ಓಣಿಯ 50 ವರ್ಷದ ಪುರುಷ (ಪಿ-76247), ಗುರುಮಠಕಲ್ ಬಸ್ ಡಿಪೋದ 30 ವರ್ಷದ ಪುರುಷ (ಪಿ-76249), ಗುರುಮಠಕಲ್ ಕಂದೂರ ಓಣಿಯ 40 ವರ್ಷದ ಮಹಿಳೆ (ಪಿ-76268).

ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ 45 ವರ್ಷದ ಪುರುಷ (ಪಿ-76291), ಯಾದಗಿರಿ ತಾಲ್ಲೂಕಿನ ವಡವಟ್ ಗ್ರಾಮದ 31 ಪುರುಷ (ಪಿ-76308), ಸುರಪುರದ 45 ವರ್ಷದ ಪುರುಷ (ಪಿ-76338), ಸುರಪುರದ 33 ವರ್ಷದ ಪುರುಷ (ಪಿ-76339), ಶಹಾಪುರ ತಾಲ್ಲೂಕಿನ ಸಾವೂರ ಗ್ರಾಮದ 36 ವರ್ಷದ ಪುರುಷ (ಪಿ-76773), ಯಾದಗಿರಿ ನಗರದ 27 ವರ್ಷದ ಪುರುಷ (ಪಿ-76967), ಯಾದಗಿರಿ ಗಂಜ್ ಏರಿಯಾ ಜೈನ್ ಕಾಲೊನಿಯ 54 ವರ್ಷದ ಮಹಿಳೆ (ಪಿ-77065), ಶಹಾಪುರ ಜಯಶ್ರೀ ಚಿತ್ರಮಂದಿರ ಹತ್ತಿರದ 52 ವರ್ಷದ ಪುರುಷ (ಪಿ-77081), ಯಾದಗಿರಿ ಗಂಜ್ ಏರಿಯಾ ಜೈನ್ ಕಾಲೊನಿಯ 27 ವರ್ಷದ ಮಹಿಳೆ (ಪಿ-77182), ಸುರಪುರ ತಾಲ್ಲೂಕಿನ ಲಕ್ಷ್ಮೀಪುರದ 22 ವರ್ಷದ ಪುರುಷ (ಪಿ-77198).

ಯಾದಗಿರಿ ಗಂಜ್ ಏರಿಯಾ ಜೈನ್ ಕಾಲೊನಿಯ 58 ವರ್ಷದ ಪುರುಷ (ಪಿ-77286), ಯಾದಗಿರಿ ತಾಲ್ಲೂಕಿನ ಅಚ್ಚೋಲಾ ಗ್ರಾಮದ 18 ವರ್ಷದ ಯುವಕ (ಪಿ-77336), ಯಾದಗಿರಿ ನಗರದ 54 ವರ್ಷದ ಮಹಿಳೆ (ಪಿ-77369), ಶಹಾಪುರ ಮಮತಾ ಕಾಲೊನಿಯ 18 ವರ್ಷದ ಯುವತಿ (ಪಿ-77434), ಯಾದಗಿರಿ ನಗರದ 26 ವರ್ಷದ ಪುರುಷ (ಪಿ-77438), ಸುರಪುರ ತಾಲ್ಲೂಕಿನ ಕಬಡಗೇರಾದ 16 ವರ್ಷದ ಯುವಕ (ಪಿ-77516), ಯಾದಗಿರಿ ಹತ್ತಿಕಟ್ಟ ಏರಿಯಾದ 24 ವರ್ಷದ ಮಹಿಳೆ (ಪಿ-77522), ಯಾದಗಿರಿ ನಗರದ 35 ವರ್ಷದ ಪುರುಷ (ಪಿ-77530), ಯಾದಗಿರಿ ಡಿ.ಸಿ ಕಚೇರಿ ಹತ್ತಿರದ 52 ವರ್ಷದ ಪುರುಷ (ಪಿ-77591), ಯಾದಗಿರಿ ತಾಲ್ಲೂಕಿನ ಸಣ್ಣಸಂಬ್ರದ 38 ವರ್ಷದ ಮಹಿಳೆ (ಪಿ-78291).

ಕಲಬುರಗಿ ಜೇವರ್ಗಿ ಕಾಲೊನಿ ಕುಮಾರ್ ಲೇಔಟ್‍ನ 32 ವರ್ಷದ ಪುರುಷ (ಪಿ-78316), ಯಾದಗಿರಿ ಮುಖ್ಯರಸ್ತೆಯ 49 ವರ್ಷದ ಪುರುಷ (ಪಿ-78412), ಗುರುಮಠಕಲ್ ತಾಲ್ಲೂಕಿನ ಅಜಲಾಪುರದ 8 ವರ್ಷದ ಬಾಲಕಿ (ಪಿ-79628) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರಲ್ಲಿ 29 ಪುರುಷರು, 14 ಮಹಿಳೆಯರು ಇದ್ದಾರೆ. ಪಿ-76247ರ ವ್ಯಕ್ತಿ ಪಿ-36276ರ ಸಂಪರ್ಕದ ಹಿನ್ನೆಲೆ ಹೊಂದಿರುತ್ತಾರೆ. ಪಿ-77522ರ ಮಹಿಳೆ ಸೊಲ್ಲಾಪುರದಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಉಳಿದ 41 ಸೋಂಕಿತರ ಸಂಪರ್ಕದ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button