ಕಥೆವಿನಯ ವಿಶೇಷ
ಬುದ್ಧಿವಂತರಿಗಾಗಿ ಎರಡು ಪ್ರಶ್ನೆ ಉತ್ತರ ನಿಮ್ಮದು..
ಬುದ್ಧಿವಂತರ ನಾಡು
ಮೊದಲನೆ ಪ್ರಶ್ನೆ: ಒಂದು ದೋಣಿ ತುಂಬಾ ಒಂದೇ ಅಳತೆಯ ತೆಂಗಿನಕಾಯಿ ತುಂಬಲಾಗಿತ್ತು, ದೋಣಿಯಲ್ಲಿ ತೆಂಗಿನಕಾಯಿ ಬೆಳೆದ ರೈತನ ಜೊತೆ ದೋಣಿ ನಡೆಸುವ ಅಂಬಿಗನಿದ್ದ; ದೋಣಿಯಲ್ಲಿ ಇನ್ನು ಒಂದೇ ಒಂದು ತೆಂಗಿನಕಾಯಿಯ ಹಾಕಿದರೂ ದೋಣಿ ಮುಳುಗುತ್ತಿತ್ತು.
ಆದರೂ ಆ ರೈತ ಇನ್ನೊಂದು ತೆಂಗಿನಕಾಯಿಯನ್ನು ಮತ್ತೊಂದು ದಡಕ್ಕೆ ತೆಗೆದುಕೊಂಡು ಹೋಗುತ್ತಾನೆ, ಅದು ಹೇಗೆ.? ಉತ್ತರ ಬರೆದು ವಾಟ್ಸಪ್ ಮಾಡಿ.
ಎರಡನೇ ಪ್ರಶ್ನೆ : ಒಮ್ಮೆ ಒಬ್ಬ ಸೇವಕ ಒಂದು ರಥದ ಗಾಡಿಯ ತುಂಬಾ ಸಾಮಾನುಗಳನ್ನು ಹೇರಿಕೊಂಡು ಹೋಗುತ್ತಾನೆ; ಸ್ವಲ್ಪ ದೂರ ಹೋದ ಮೇಲೆ ಎದುರಿಗೆ ಒಂದು ಸೇತುವೆಯ ಕಮಾನು ಸಿಗುತ್ತದೆ.
ಸಾಮಾನು ತುಂಬಿದ ಗಾಡಿಯ ತುದಿ ಸೇತುವೆಯ ಕಮಾನಿಗೆ ತಾಗುತ್ತದೆ; ದಾಟಲು ಸಾಧ್ಯವಾಗುವುದಿಲ್ಲ; ಒಂದು ಇಂಚು ಗಾಡಿಯ ತುದಿ ತಗ್ಗಿದ್ದರೆ ಗಾಡಿ ದಾಟುತ್ತಿತ್ತು; ಆದರೂ ಆ ಸೇವಕ ಗಾಡಿಯನ್ನು ಸೇತುವೆಯಿಂದ ಆಚೆ ಕಡೆ ದಾಟಿಸಿದ ; ಅದು ಹೇಗೆ.? ಉತ್ತರ ಬರೆದು whatsup ಮಾಡಿ.
ವಾಟ್ಸಪ್ ನಂಬರ 9448405608
ಸೂಚನೆಃ ಡಾ.ಈಶ್ವರಾನಂದ ಸ್ವಾಮೀಜಿಯವರು ವಿನಯವಾಣಿ ಯಲ್ಲಿ ಬರೆಯುವ ದಿನಕ್ಕೊಂದು ಕಥೆ ಯಲ್ಲಿ ಈಗಾಗಲೇ ಅವರ ಸಂಗ್ರಹ ಕಥೆಯಲ್ಲಿ ಈ ಪ್ರಶ್ನೆ ಕುರಿತು ಉತ್ತರವು ಬರೆದಿದ್ದಾರೆ. ಅದನ್ನು ಓದಿದವರಾರು ದಯವಿಟ್ಟು ಉತ್ತರ ಬರೆಯಬೇಡಿ. ಎಲ್ಲೂ ಓದದವರು ಪ್ರಾಮಾಣಿಕವಾಗಿ ಯೋಚಿಸಿ ಉತ್ತರ ಬರೆದು ವಾಟ್ಸಪ್ ಮಾಡಿ.
-ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.