ಐಪಿಎಸ್ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ
ಯುವ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ
ವಿವಿ ಡೆಸ್ಕ್ಃ ಐಪಿಎಸ್ 2018 ರ ಬ್ಯಾಚ್‌ನ ಯುವ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಂವಹನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯುವ ಪೊಲೀಸ್ ಅಧಿಕಾರಿಗಳಿಂದ ಹತ್ತಾರು ವಿಷಯಗಳನ್ನು ಚರ್ಚೆ ನಡೆಸುವ ಮೂಲಕ ಪ್ರಧಾನಿಯವರು ಯುವ ಪೊಲೀಸ್ ಪಡೆಯಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಯುವ ಪೊಲೀಸ್ ಅಧಿಕಾರಿಗಳು ಸಮರ್ಪಕ ಕರ್ತವ್ಯ ನಿರ್ವಹಿಸಲು ಹೆಚ್ಚಿನ ತಂತ್ರಜ್ಞಾನ ಬಳಕೆ ಸೇರಿದಂತೆ ನಮ್ಮ ಪೊಲೀಸ್ ಪಡೆಗಳ ಕಾರ್ಯವನ್ನು ಇನ್ನಷ್ಟು ಹೆಚ್ಚಿಸಲು ಸಂಬಂಧಿಸಿದ ವ್ಯಾಪಕವಾದ ವಿಷಯಗಳನ್ನು ಅವರು ಚರ್ಚಿಸುವ ಮೂಲಕ ಪೊಲೀಸ್ ಪಡೆಗೆ ಪ್ರೋತ್ಸಾಹ ತುಂಬಿದರು ಎನ್ನಲಾಗಿದೆ.
ಮತ್ತು ದೇಶದಲ್ಲಿ ನೀವು ನಿರ್ವಹಿಸುವ ಕೆಲಸದಿಂದ ಹೆಚ್ಚಿನ ಬದಲಾವಣೆ, ತರಲು ಏನಾದರು ಚಿಂತನೆಗಳಿದ್ದಲ್ಲಿ ಪರಸ್ಪರ ವಿಚಾರಗಳನ್ನು ಹಂಚಿಕೊಳ್ಳಬೇಕು. ಅದರಿಂದ ಸುಧಾರಣೆಗೆ ಬೇಕಾದ ಅಗತ್ಯತೆಗಳನ್ನು ಪೂರೈಸಲು ಮತ್ತು ಸಾಧನಗಳನ್ನು ಬಳಸಿಕೊಳ್ಳುವದು ಹೇಗೆ ಎಂಬುದನ್ನು ಅರಿಯಲು ಸಾಧ್ಯ ಎಂದಿದ್ದಾರೆ ಎನ್ನಲಾಗಿದೆ.
ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ಉತ್ಸಾಹಿ ಪೊಲೀಸ್ ಅಧಿಕಾರಿಗಳು ಮೋದಿಯವರೊಂದಿಗಿನ ಸಂವಾದದಿಂದ ಸಂತಸ ತಂದಿದೆ. ಅಲ್ಲದೆ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ದೊರೆತಂತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.