ಸಂಸ್ಕೃತಿ
ದೃಶ್ಯ ವೈಭವ : ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಜನಸಾಗರ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವದಿಂದ ನಡೆದಿದೆ. ಪ್ರತಿವರ್ಷ ಪಾಲ್ಗುಣ ಮಾಸದ ಚಿತ್ರ ನಕ್ಷದ ವೇಳೆ ಜರುಗುವ ಪವಾಡ ಪುರುಷ ತಿಪ್ಪೇಶನ ಜಾತ್ರೆಗೆ ಲಕ್ಷೋಪಲಕ್ಷ ಜನ ಭಕ್ತರು ಸೇರುತ್ತಾರೆ. ಅಂತೆಯೇ ಈವರ್ಷವೂ ಸಹ ಲಕ್ಷಾಂತರ ಜನ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ವಿವಿಧ ಜನಪದ ಕಲಾತಂಡಗಳ ಮೆರಗು, ಬುಡಕಟ್ಟು ಸಂಸ್ಕೃತಿಯ ಕಲಾ ಪ್ರದರ್ಶನ, ಲಕ್ಷಾಂತರ ಭಕ್ತ ಗಣ ಸಾಗರ, ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಶ್ರೀಗುರು ತಿಪ್ಪೇರುದ್ರಸ್ವಾಮಿಯ ಅದ್ಧೂರಿ ರಥೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಸಾವಿರಾರು ಭಕ್ತರು ಹರಕೆ ತೀರಿಸಿಲು ಟನ್ ಗಟ್ಟಲೇ ಕೊಬ್ಬರಿ ಬೆಂಕಿಗಾಹುತಿ ಮಾಡಿದರು. ರಥೋತ್ಸವಕ್ಕೂ ಮೊದಲು ಬೆಂಗಳೂರು ಮೂಲದ ಉದ್ಯಮಿ ಮುಖೇಶ್ 72ಲಕ್ಷ ರೂಪಾಯಿಗೆ ಮುಕ್ತಿ ಬಾವುಟ ಪಡೆದರು.