ಪ್ರಮುಖ ಸುದ್ದಿ
ಸಚಿವ ಆಕಾಂಕ್ಷಿ ತಿಪ್ಪಾರಡ್ಡಿ ನಿರಾಸೆಃ ಸಿಎಂ ವಿರುದ್ಧ ಆಕ್ರೋಶ
ಸಚಿವ ಆಕಾಂಕ್ಷಿ ತಿಪ್ಪಾರಡ್ಡಿ ನಿರಾಸೆಃ ಸಿಎಂ ವಿರುದ್ಧ ಆಕ್ರೋಶ
ಬೆಂಗಳೂರಃ ಸಚಿವ ಸಂಪುಟದಲ್ಲಿ ಸಮಾನತೆ ಕಾಣುತ್ತಿಲ್ಲ. ನಾನು 51 ವರ್ಷ ರಾಜಕಾರಣ ಮಾಡಿದ್ದೇನೆ ಅದೆಲ್ಲ ವೇಸ್ಟ್ ಎಂದು ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ತಿಪ್ಪಾರಡ್ಡಿ ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ಸೋತವರಿಗೆ ಎಂಎಲ್ ಸಿ ಮಾಡಿ ಸಚಿವರನ್ನಾಗಿ ಮಾಡುತ್ತಾರೆ. ಕೇಳಿದರೆ ಅವರು ಸರ್ಕಾರ ರಚನೆಗೆ ಸಹಾಯ ಮಾಡಿದ್ದಾರಂತಾರೆ ಅದೇನ್ ಸಹಾಯ ಮಾಡಿದ್ದಾರೋ ಅವರಿಗೆ ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.