ನಮ್ಮ ಅಸ್ಮಿತೆ
ನೆಲವಿದು ಕರ್ನಾಟಕ,
ನಳ್ನುಡಿಯದು ಸಿರಿ ಗನ್ನಡವು.,
ಇಲ್ಲಿ ಜನಿಸಿದ ಮನುಜರೆ ಧನ್ಯರು,
ಎನಿತು ಪಾವನವು ನಮ್ಮಯ ಜೀವನವು.
ಧನಿ ಎತ್ತಲೆ ಮಣಿ ಮುತ್ತಿನಹಾರ,
ಕೈ ಎತ್ತಲೆ., ಕಲ್ಪವೃಕ್ಷವದು,
ಮಣಿಯಲೇ, ತಣಿಯಲೆ
ಎನ್ನ ಒಳಹೊರಗೊಂದಾದ.,
ಭಾವ ಬೆರಗುಗಳ ಭಾವ ಬಂಧ ಕನ್ನಡ!
ಕಲ್ಲಿನ ಕಣಕಣದಲು ಶಿಲ್ಪಗಳ ಜೀವ,
ಬೀಸುವ ತಂಬೆಲರಲು ಕನ್ನಡದೇ ಭಾವ,
ರಸಋಷಿಗಳ ನೆಲೆವೀಡು.,
ಕನ್ನಡಿಗರ ತಾಯ್ನಾಡು,
ಒಡಲ ಮಮತೆಯ ನುಡಿಯು ಈ ಸವಿ ಗನ್ನಡ.
ಹಂಪೆಯ ಸ್ಥoಭದಲಿ ನುಡಿಸಲೆ ನಿನ್ನ!
ಪಂಪನ ಮರಿದುಂಬಿಯಾಗುವ ಮುನ್ನ!
ಸಪ್ತಸ್ವರವಾಗಲೇ., ಝೆoಕರಿಸಿಬಿಡಲೇ.,
ಮೈದುಂಬಿ ಹರಿಯುವ ನದಿಯಾಗಿ,
ಕಂಪ ಬೀರುವ ಈ ಕರುನಾಡ ಮಣ್ಣಾಗಿ,!
ನಿನ್ನನೆ ನೆಚ್ಚಿದೆ., ನಿನ್ನನೇ ಮೆಚ್ಚಿದೆ,
ನಿನ್ನಿಚ್ಛೆಯೊಳು ನಾ ನಡೆದೆ ಬಿಡುವೆ!
ಬೆಚ್ಚಿ ಬೀಳದಿರು., ಕೆಚ್ಚೆದೆಯ ಕಲಿಯಾಗಿ,
ಕನ್ನಡದ ಕೆಚ್ಚೆನ್ನು ದಶದಿಕ್ಕಲಿ ಬಿತ್ತಬೇಕೆ?
ಮಾತೆ ಋಣವ ತೀರಿಸಲು ಜನ್ಮಾವೊಂದೇ ಸಾಕೆ.!
ಅಮ್ಮ ನಿನ್ನ ಉಸಿರಲಿ ನಮ್ಮ ಹೆಸರ ಕವಿತೆ,
ಧಮನಿಗಳಲಿ ಹರಿಯುತಿರಲಿ ಕನ್ನಡದ ಒರತೆ,
ಎಲ್ಲೆ ಇರಲಿ ಹೇಗೆ ಇರಲಿ ನಿನ್ನ ಮಡಿಲೇ ಸ್ವರ್ಗ,
ನಡೆಗಳಲಿ ನುಡಿಗಳಲಿ ಇರಲಿ ಮಾತೆ ಮಮತೆ!
ಎಂದೆಂದಿಗೂ ಅಳಿಸದಿರಲಿ ಕನ್ನಡದ ಅಸ್ಮಿತೆ.!!
– ತುಂಗಾ ಜಿ. ಪೋದ್ದಾರ. ಕನ್ನಡ ಭಾಷಾ ಶಿಕ್ಷಕರು, ಕೆಪಿಎಸ್ ಪ್ರೌಢಶಾಲಾ ವಿಭಾಗ, ಸಗರ. ತಾ. ಶಹಪುರ ಜಿ. ಯಾದಗಿರಿ. Ph 9880911867