ಪ್ರಮುಖ ಸುದ್ದಿ
ಯತ್ನಾಳ ಮಂತ್ರಿ ಆಗೇ ಆಗ್ತಾರೆ – ಸಚಿವ ಕತ್ತಿ ಹೇಳಿಕೆ

ಯತ್ನಾಳ ಮಂತ್ರಿ ಆಗೇ ಆಗ್ತಾರೆ – ಸಚಿವ ಕತ್ತಿ ಹೇಳಿಕೆ
ವಿಜಯಪುರಃ ಬಸನಗೌಡ ಪಾಟೀಲ್ ಯತ್ನಾಳ ಮಂತ್ರಿ ಆಗೇ ಆಗ್ತಾರೆ. ನಾವಿಬ್ರೂ ಜೊತೆಯಾಗಿ ಕೆಲಸ ಮಾಡ್ತೇವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಬುಧವಾರ ಗ್ರಾಮ ಒನ್ ಸೇವಾ ಕೇಂದ್ರದ ವರ್ಚುವಲ್ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯಮಂತ್ರಿ ಯೊಂದಿಗೆ ಮಾತನಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಯಾಬಿನೆಟ್ ಪುನಾರಚನೆ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ಇದು ಜನರ ಕ್ಯೂರಿಯಾಸಿಟಿ ಅಲ್ಲ ಮಾಧ್ಯಮದವರ ಕ್ಯೂರಾಸಿಟಿ ಎಂದುತ್ತರಿಸಿದರು. ಸಚಿವ ಕತ್ತಿ ಅವರು, ಯತ್ನಾಳ ಸಚಿವರಾಗಲಿದ್ದಾರೆ ಎಂಬ ಹೇಳಿಕೆಗೆ ಯತ್ನಾಳ ಮುಗುಳ್ನಗೆ ಚಲ್ಲಿರುವದು ಕಂಡು ಬಂದಿತು.