ಎರಡನೇ ಪ್ರಯತ್ನದಲ್ಲಿ 24ನೇ ರ್‍ಯಾಂಕ್ ಪಡೆದು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭಿಷೇಕ್
ನವದೆಹಲಿ: ಯುಪಿಎಸ್ ಸಿಯಲ್ಲಿ ಯಶಸ್ವಿಯಾಗುವುದು ಸಾಮಾನ್ಯದ ಮಾತಲ್ಲ. ಆದರೆ ಇದರಲ್ಲಿ ಪಾಸ್ ಆದರೆ ಸಾಕು, IAS-IPS ಅಧಿಕಾರಿಯಾಗುತ್ತಾರೆ. ಆದರೆ ಅಭಿಷೇಕ್ ಯುಪಿಎಸ್ ಸಿ ಪರೀಕ್ಷೆಯನ್ನು ಎರಡೆರಡು ಸಲ ಪಾಸ್ ಮಾಡಿದ್ದಾರೆ. ಅವರ ಸಾಧನೆಯ ಒಂದು ನೋಟ ಇಲ್ಲಿದೆ.
ಅಭಿಷೇಕ್ ಜೈನ್ ದೆಹಲಿ ನಿವಾಸಿ. ತಮ್ಮ ಗುರಿಯ ಬಗ್ಗೆ ತುಂಬಾ ಸ್ಪಷ್ಟತೆ ಹೊಂದಿದ್ದರು. ಐಎಎಸ್ ಅಧಿಕಾರಿಯಾಗಲೇಬೇಕೆಂದು ಶ್ರಮ ಹಾಕಿದ್ದರು.ಅಭಿಷೇಕ್ ಅವರು ಚಿಕ್ಕ ವಯಸ್ಸಿನಲ್ಲೇ ಬಡವರಿಗೆ ಸಹಾಯ ಮಾಡಲು ಬಯಸಿದ್ದರು. ಇದಕ್ಕಾಗಿ, ಅವರು ನಾಗರಿಕ ಸೇವೆಗೆ ಸೇರುವುದು ಉತ್ತಮವಾದದ್ದನ್ನು ಎಂದು ಅರ್ಥಮಾಡಿಕೊಂಡಿದ್ದರು.ದೆಹಲಿ ವಿಶ್ವವಿದ್ಯಾನಿಲಯದಿಂದ B.Com ಮಾಡಿದ ನಂತರ, ಅಭಿಷೇಕ್ ಜೈನ್ UPSC ಪರೀಕ್ಷೆಗೆ ತಯಾರಿ ಆರಂಭಿಸಿದ್ದರು.
ಅಭಿಷೇಕ್ ಜೈನ್ ಅವರ ಅಜ್ಜ ಐಎಎಸ್ ಅಧಿಕಾರಿಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಾಯಿಯ ಚಿಕ್ಕಪ್ಪ ಸಹ ನಾಗರಿಕ ಸೇವೆಯೊಂದಿಗೆ ಸಂಬಂಧ ಹೊಂದಿದ್ದರು. ಇದರಿಂದ ಅವರು ಬಾಲ್ಯದಿಂದಲೂ ಸರ್ಕಾರಿ ಕೆಲಸದ ಬಗ್ಗೆ ಸಾಕಷ್ಟು ತಿಳುವಳಿಕೆಯನ್ನು ಹೊಂದಿದ್ದರು . ತಾನು ಅವರಂತೆ ಆಗಬೇಕು ಎಂದು ಬಯಸಿದ್ದರು. ಐಎಎಸ್ ಅಭಿಷೇಕ್ ಜೈನ್ ಅವರು 24 ವರ್ಷ ವಯಸ್ಸಿನವರೆಗೆ ಯುಪಿಎಸ್ ಸಿ ಪರೀಕ್ಷೆಗೆ ಎರಡು ಪ್ರಯತ್ನಗಳನ್ನು ನೀಡಿದ್ದರು. ಎರಡರಲ್ಲೂ ಉತ್ತಮ ಶ್ರೇಣಿಯನ್ನು ಪಡೆದರು. ಮೊದಲ ಪ್ರಯತ್ನವನ್ನು ನೀಡುವ ಮುನ್ನ ಅವರು ಒಂದು ವರ್ಷ ಕೋಚಿಂಗ್ ಪಡೆದಿದ್ದರು. ಆಗ 111 ನೇ ರ್ಯಾಂಕ್ ಗಳಿಸಿದ್ದರಿಂದ IRS ಅಧಿಕಾರಿ ಹುದ್ದೆಯನ್ನು ನೀಡಲಾಯಿತು.
ಅಭಿಷೇಕ್ ಅವರಿಗೆ ಐಎಎಸ್ ಹುದ್ದೆಯೇ ಬೇಕಿತ್ತು. ಅದ್ದರಿಂದ 2019 ರಲ್ಲಿ ಅವರು ಮತ್ತೆ ಪರೀಕ್ಷೆಯಲ್ಲಿ ಕಾಣಿಸಿಕೊಂಡರು. ಎರಡನೇ ಪ್ರಯತ್ನದಲ್ಲಿ ಅಭಿಷೇಕ್ ಜೈನ್ 24ನೇ ರ್‍ಯಾಂಕ್ ಗಳಿಸಿದ್ದು, ಇದರೊಂದಿಗೆ ಐಎಎಸ್ ಅಧಿಕಾರಿಯಾಗುವ ಕನಸು ಕೂಡ ನನಸಾಗಿದೆ.